

ಭದ್ರಾವತಿ: ಮಕ್ಕಳ ಕಲಿಕೆ ಹಾಗೂ ಜ್ಞಾನ ವೃದ್ಧಿಸಲು ವಸ್ತುಪ್ರದರ್ಶನಗಳು ಸಹಕಾರಿ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಿ.ಸಿದ್ದಬಸಪ್ಪ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಆಶ್ರಿತ ವಿಶ್ವೇಶ್ವರಯ್ಯ ವಿದ್ಯಾಸಂಸ್ಥೆಯಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಮಕ್ಕಳು ಪ್ರತಿ ವಿಚಾರದಲ್ಲೂ ಹೆಚ್ಚು ಗಮನಹರಿಸಿ ಕ್ರಿಯಾಶೀಲರಾದಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಬಹುದು ಎಂದು ತಿಳಿಸಿದರು.
ವಿಜ್ಞಾನ ದಿನ ಅಂಗವಾಗಿ ನಗರದ ವಿಶ್ವೇಶ್ವರಯ್ಯ ಆಂಗ್ಲ ಹಿರಿಯ ಪ್ರಾಥಮಿಕ ಶಾಲಾ ವಿಭಾಗದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಹಾಗೂ ವಿಜ್ಞಾನ ಚಲನಾ ಮಾದರಿಗಳು ಗಮನ ಸೆಳೆದವು. ವಿದ್ಯಾಸಂಸ್ಥೆ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಮೋಹನ್, ಕಾರ್ಯಾಧ್ಯಕ್ಷ ವೆಂಕಟೇಶ್, ಖಜಾಂಚಿ ಪ್ರಶಾಂತ್, ಬಿ.ಎಡ್. ವಿಭಾಗದ ಪ್ರಾಚಾರ್ಯ ಡಾ. ಎಸ್.ಪಿ.ರಾಕೇಶ್, ದೈಹಿಕ ಶಿಕ್ಷಕ ಶಿವಲಿಂಗೇಗೌಡ ಇತರರಿದ್ದರು.