ಸಾಗರ: ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಅಂತರ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಸಾಗರ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿರುತ್ತಾರೆ.
ಡೆಕಥ್ಲಾನ್‌ನಲ್ಲಿ ತೇಜಸ್ ಡಿ. ನಾಯ್ಕ ಚಿನ್ನದ ಪದಕ, ಹೆಪ್ಟಾಥ್ಲಾನ್‌ನಲ್ಲಿ ಎನ್.ಅರ್ಪಿತಾ ಬೆಳ್ಳಿ ಪದಕ, 1500 ಮೀ. ಓಟದಲ್ಲಿ ಎಸ್.ಅನುಷಾ ಬೆಳ್ಳಿ ಪದಕ, 100 ಮೀ. ಹರ್ಡಲ್ಸ್ ಮತ್ತು 400 ಮೀ. ಹರ್ಡಲ್ಸ್‌ನಲ್ಲಿ ಎಚ್.ಎಂ.ಪವನ್ ಕಂಚಿನ ಪದಕ ಪಡೆದಿದ್ದಾರೆ. ಡೆಕಾಥ್ಲಾನ್‌ನಲ್ಲಿ ಎಸ್.ಧ್ರುವ ಕಂಚಿನ ಪದಕ, ತ್ರಿಬಲ್ ಜಂಪ್‌ನಲ್ಲಿ ಎಸ್.ಭರತ್ ಕಂಚಿನ ಪದಕ ಗಳಿಸಿದ್ದಾರೆ.
ಪ್ರಾಚಾರ್ಯ ಡಾ. ಜಿ.ಸಣ್ಣಹನುಮಪ್ಪ, ಕ್ರೀಡಾ ಸಂಚಾಲಕ ಶಿವರಾಯಪ್ಪ, ದೈಹಿಕ ಶಿಕ್ಷಣ ನಿರ್ದೇಶಕ ಎಚ್.ಜಿ.ಕೊಟ್ರೇಶಪ್ಪ, ಕಾಲೇಜು ಅಭಿವೃದ್ಧಿ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದಿಸಿದರು.