ಆನಂದಪುರ: ಪಟ್ಟಣ ಸೇರಿ ಸುತ್ತಮುತ್ತ ಭಾನುವಾರ ದಿನವಿಡೀ ಧಾರಾಕಾರ ಮಳೆ ಸುರಿಯಿತು. ಬೆಳಗ್ಗೆ ಮೋಡ ಕವಿದ ವಾತಾವರಣದೊಂದಿಗೆ ಆರಂಭವಾದ ಮಳೆಯೊಂದಿಗೆ ಜೋರಾಗಿ ಗಾಳಿ ಬೀಸುತ್ತಿತ್ತು. ಸಾಕಷ್ಟು ಮಳೆ ಸುರಿದ ಕಾರಣ ಕೆರೆ, ಹೊಳೆ, ಹಳ್ಳಗಳಿಗೆ ನೀರು ಹರಿದು ನೀರಿನ ಮಟ್ಟ ಹೆಚ್ಚಾಗಿದೆ.
ಪ್ರಮುಖ ಬೀದಿಗಳಲ್ಲಿ ಚರಂಡಿ ಕಸದಿಂದ ಕಟ್ಟಿರುವ ಕಾರಣ ಮಳೆ ನೀರು ಉಕ್ಕಿ ರಸ್ತೆಯಲ್ಲಿ ಹರಿಯುತ್ತಿತ್ತು. ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಮಿಯಾ ಜುಮ್ಮಾ ಮಸೀದಿ, ಬಸ್ ನಿಲ್ದಾಣ ಮತ್ತು ಪೊಲೀಸ್ ಠಾಣೆ ಎದುರು ಅರಣ್ಯ ವಸತಿ ಗೃಹಗಳವರೆಗೂ ಚರಂಡಿ ಮಣ್ಣಿನಿಂದ ತುಂಬಿರುವ ಕಾರಣ ಹೆದ್ದಾರಿಯಲ್ಲಿ ಹಳ್ಳದಂತೆ ನೀರು ಹರಿದು ಕೆಲ ಸಮಯ ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.