ಸೊರಬ: ಶ್ರೇಷ್ಠ ಸಾಹಿತ್ಯ ಪರಂಪರೆ ಹೊಂದಿರುವ ಭಾಷೆ ಕನ್ನಡ. ವಿಶ್ವದ ಎಲ್ಲ ಭಾಗಗಳಲ್ಲಿಯೂ ಕನ್ನಡ ಭಾಷೆ ಮಾತನಾಡುವವರು ಇದ್ದು, ಭಾಷೆಯ ಹಿರಿಮೆ ವಿಶ್ವವ್ಯಾಪಿಸಿದೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಶಂಕರ್ ಶೇಟ್ ಹೇಳಿದರು.

ಪಟ್ಟಣದ ರಂಗಮಂದಿರದಲ್ಲಿ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ಮತ್ತು ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕನ್ನಡ ವಿಷಯದಲ್ಲಿ ವಿದ್ಯಾರ್ಥಿಗಳು 125 ಅಂಕ ಪಡೆದಿರುವುದು ಅತ್ಯಂತ ಶ್ಲಾಘನೀಯ ಎಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತ ಕಾರ್ತಿಕ್ ಸಾಹುಕಾರ್ ಮಾತನಾಡಿ, ಸಾಧನೆ ಮಾಡುವ ಛಲ ಇರುವವರಿಗೆ ಯಶಸ್ಸು ಖಚಿತ. ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಬೇಕು ಎಂದರು.
ಡಾ. ಚಿದಾನಂದ, ಡಾ. ಪ್ರಭು ಸಾಹುಕಾರ್, ಡಾ. ಶ್ರೀನಾಥ್, ರೋಟರಿ ಮಾಜಿ ಗವರ್ನರ್ ಡಾ. ಪಿ.ನಾರಾಯಣ್, ಲಕ್ಷ್ಮಣ ಸಾಗರ್, ರಾಜು ಹಿರಿಯಾವಲಿ ಇತರರಿದ್ದರು. ಡಾ. ಹೇಮಾ ಪಟ್ಟಣಶೆಟ್ಟಿ ರಚಿಸಿದ ಚೆಕಾವ್ ಟು ಶಾಂಪೇನ್ ನಾಟಕವನ್ನು ಶಿವಮೊಗ್ಗದ ಎನ್‌ಇಎಸ್ ಹವ್ಯಾಸಿ ರಂಗತಂಡ ಪ್ರದರ್ಶನ ನೀಡಿತು.