ಜೆಸಿ ಆಸ್ಪತ್ರೆ ನೂತನ ವೈದ್ಯರಿಗೆ ಸ್ವಾಗತ

17 Tth 03
ತೀರ್ಥಹಳ್ಳಿ ಜೆಸಿ ಆಸ್ಪತ್ರೆಗೆ ನೂತನವಾಗಿ ಆಗಮಿಸಿದ ವೈದ್ಯರ ತಂಡವನ್ನು ತಾಲೂಕು ಆರೋಗ್ಯ ಇಲಾಖೆಯಿಂದ ಸ್ವಾಗತಿಸಲಾಯಿತು. ಡಾ. ಕೆ.ಎಸ್.ಪ್ರಕಾಶ್, ಡಾ. ಗಣೇಶ್ ನಾಯಕ್, ಡಾ. ಕವಿತಾ ಇತರರಿದ್ದರು.
Published on

ತೀರ್ಥಹಳ್ಳಿ: ಪಟ್ಟಣದ ತಾಲೂಕು ಆಸ್ಪತ್ರೆಗೆ ನೂತನವಾಗಿ ಆಗಮಿಸಿದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಾಲೂಕು ಆರೋಗ್ಯ ಇಲಾಖೆಯಿಂದ ಸ್ವಾಗತಿಸಲಾಯಿತು.

ಈ ಹಿಂದೆ ತೀರ್ಥಹಳ್ಳಿಯಲ್ಲಿ ತಾಲೂಕು ಆರೋಗ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ಡಾ. ಕೆ.ಎಸ್.ಪ್ರಕಾಶ್, ಕೀಲು ಮತ್ತು ಮೂಳೆ ತಜ್ಞ ಡಾ. ಗಣೇಶ್ ನಾಯಕ್, ಅರಿವಳಿಕೆ ತಜ್ಞ ಡಾ. ವಿನಯ್, ಮಕ್ಕಳ ತಜ್ಞ ಡಾ. ಷಣ್ಮುಖಪ್ರಿಯ, ಡಾ. ಸುಪ್ರೀತ್, ಇಎನ್‌ಟಿ ತಜ್ಞೆ ಡಾ. ಕವಿತಾ, ವೈದ್ಯಾಧಿಕಾರಿ ಡಾ. ಸೈಯದ್, ಶುಶ್ರೂಷಣಾಧಿಕಾರಿ ಶ್ರೀಕಾಂತ್, ಲಕ್ಷ್ಮೀ ಮತ್ತು ಶೈಲಾ ಅವರನ್ನು ಸ್ವಾಗತಿಸಲಾಯಿತು.

ತಾಲೂಕು ಆರೋಗ್ಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಟಿ.ವಿ.ಸತೀಶ, ಜೆಸಿ ಆಸ್ಪತ್ರೆ ಶಸ್ತ್ರಚಿಕಿತ್ಸಾ ತಜ್ಞ ವೈದ್ಯಾಧಿಕಾರಿ ರಂಗಸ್ವಾಮಿ, ಮೇಟ್ರನ್ ಜಯಲಕ್ಷ್ಮೀ, ಸಂಘದ ಉಪಾಧ್ಯಕ್ಷೆ ತಿಲಕಮ್ಮ, ಪದಾಧಿಕಾರಿಗಳಾದ ರಾಜಪ್ಪ, ಸತೀಶ್, ಹನುಮಂತ ರೆಡ್ಡಿ, ಡಿ.ಟಿ.ಗಿರಿ, ಪ್ರಮೀಳಾ, ತಿಪ್ಪೇಶ್, ಸಂದೀಪ, ಯಶೋಧಾ, ಶರಾವತಿ, ಸಂತೋಷ, ದಯಾನಂದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net