ಸಮಗ್ರ ಕೃಷಿ ಪದ್ಧತಿ ರೈತರಿಗೆ ಲಾಭದಾಯಕ

25 RPT 1
ರಿಪ್ಪನ್‌ಪೇಟೆ ಸಮೀಪದ ದೊಂಬೆಕೊಪ್ಪದಲ್ಲಿ ಸಮಗ್ರ ಕೃಷಿಯಲ್ಲಿ ಸಹಕಾರಿಗಳ ಪಾತ್ರ ವಿಚಾರ ಗೋಷ್ಠಿಯನ್ನು ಆರ್.ಎಂ.ಮಂಜುನಾಥ್ ಗೌಡ, ವಾಟಗೋಡು ಸುರೇಶ್ ಉದ್ಘಾಟಿಸಿದರು. ಎಚ್.ಎನ್.ವಿದ್ಯಾಧರ, ಎಂ.ವಿ.ಜಯರಾಂ, ಎಂ.ಎಂ.ಪರಮೇಶ್ ಇತರರಿದ್ದರು.
Published on

ರಿಪ್ಪನ್‌ಪೇಟೆ: ಹವಾಮಾನ, ಬೆಲೆಯಲ್ಲಿ ವ್ಯತ್ಯಯ, ರೋಗ ಬಾಧೆಗಳಿಂದ ಕೃಷಿಕ ಸಂಕಷ್ಟಕ್ಕೆ ಸಿಲುಕಿದ್ದಾನೆ. ಹಾಗಾಗಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಹೇಳಿದರು.

ಹರತಾಳು ಗ್ರಾಪಂ ವ್ಯಾಪ್ತಿ ದೊಂಬೆಕೊಪ್ಪ ಗ್ರಾಮದ ಪ್ರಗತಿಪರ ಕೃಷಿಕ ಎನ್.ಕುಮಾರ್ ಅವರ ಕೃಷಿ ಕ್ಷೇತ್ರದಲ್ಲಿ ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಶಿವಮೊಗ್ಗ ಡಿಸಿಸಿ ಬ್ಯಾಂಕ್ ಹಾಗೂ ಸಹಕಾರ ಇಲಾಖೆ ಆಶ್ರಯದಲ್ಲಿ ಆಯೋಜಿಸಿದ್ದ ಸಮಗ್ರ ಕೃಷಿಯಲ್ಲಿ ಸಹಕಾರಿಗಳ ಪಾತ್ರ ವಿಷಯ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಮಲೆನಾಡಿನ ಸಾಂಪ್ರದಾಯಿಕ ಬೆಳೆ ಅಡಕೆಯು ಬಯಲು ಸೀಮೆ ಪ್ರದೇಶಕ್ಕೂ ಕಾಲಿಟ್ಟಿದೆ. ಬೇಡಿಕೆಗಿಂತ ಬೆಳೆ ಅಧಿಕವಾದಾಗ ಬೆಲೆ ಕುಸಿಯುವ ಸಾಧ್ಯತೆ ಇರುತ್ತದೆ. ಮುಂದಿನ ಸಮಸ್ಯೆ ಎದುರಿಸಲು ರೈತರು ಈಗಲೇ ಆಲೋಚಿಸಿ ಪರ್ಯಾಯ ಬೆಳೆಗಳತ್ತ ಗಮನಹರಿಸುವುದು ಸೂಕ್ತ. ರೈತ ಕುಮಾರ್ ಅವರು ಪರಿಸರ ಪೂರಕ ಕೃಷಿ ಕೈಗೊಂಡು, ವಿದೇಶಿ ಬೆಳೆಯನ್ನು ಮಲೆನಾಡಿನಲ್ಲಿ ಪರಿಚಯಿಸಿದ್ದಾರೆ. ವಿಶ್ವ ತೋಟಗಾರಿಕಾ ಹಣ್ಣಿನ ತೋಟ ನಿರ್ಮಿಸಿದ್ದಾರೆ. ಇದೇ ರೀತಿ ರೈತರು ಸಮಗ್ರ ಕೃಷಿ ಪದ್ಧತಿ ಬಗ್ಗೆ ಆಲೋಚನೆ ನಡೆಸಬೇಕು ಎಂದರು.

ಪೂರ್ವಜರ ಸಹಜ ಕೃಷಿ ಪದ್ಧತಿಯನ್ನು ಮರೆತಿದ್ದೇವೆ. ಹೆಚ್ಚಿನ ಲಾಭದಾಸೆಗೆ ರಸಗೊಬ್ಬರ, ಔಷಧಗಳ ಯಥೇಚ್ಛ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶವಾಗಿದೆ. ಈ ಸತ್ವವನ್ನು ಮರುಸ್ಥಾಪಿಸಬೇಕಿದೆ. ಬೆಳೆಗಳಿಗೆ ಕಲುಷಿತ ಸಾವಯವ ಬಳಸದಂತೆ ಎಚ್ಚರ ವಹಿಸಬೇಕು. ಆರ್.ಎಂ.ಮಂಜುನಾಥ ಗೌಡ ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಶಿಮುಲ್ ಅಧ್ಯಕ್ಷ ಎಚ್.ಎನ್.ವಿದ್ಯಾಧರ, ಜಿಲ್ಲಾ ಯೂನಿಯನ್ ಅಧ್ಯಕ್ಷ ವಾಟಗೋಡು ಸುರೇಶ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ವಿ.ಜಯರಾಂ, ಡಿಸಿಸಿ ನಿರ್ದೇಶಕ ಎಂ.ಎಂ.ಪರಮೇಶ್, ಜಿ.ಎನ್.ಸುಧೀರ್, ನರೇಗಾ ಸಹಾಯಕ ನಿರ್ದೇಶಕ ರಾಜೇಂದ್ರ ಕುಮಾರ್, ನಾಗರಾಜ್, ಶಶಿಧರ, ಓಂಕೇಶ್, ವಿನಯ್‌ಕುಮಾರ್, ಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net