ಮಕ್ಕಳಿಗೆ ದೇಶೀಯ ಚಿಂತನೆ ಅರಿವು ಮೂಡಿಸಿ

28sgr1
ಕೃಷಿ ಜಾಗೃತಿ ಮತ್ತು ಮಣ್ಣಿನ ಸೊಗಡು ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಸಾಗರ ತಾಲೂಕಿನ ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಪ್ರೌಢಶಾಲೆ ಮಕ್ಕಳು.
Published on

ಸಾಗರ: ಮಕ್ಕಳಿಗೆ ಪಠ್ಯ, ಪಠ್ಯೇತರ ಚಟುವಟಿಕೆ ಜತೆಗೆ ದೇಶೀಯ ಚಿಂತನೆಗಳ ಅರಿವು ಮೂಡಿಸಬೇಕಿದೆ. ಸಂಸ್ಕೃತಿ, ಕೃಷಿ, ಸಾಮಾಜಿಕ ಜೀವನದ ಕುರಿತು ಜ್ಞಾನ ನೀಡಬೇಕು ಎಂದು ರಂಗಕರ್ಮಿ ಸಂತೋಷ್ ಹೇಳಿದರು.

ತಾಲೂಕಿನ ಗಿಣಿವಾರದ ಕೊಡಚಾದ್ರಿ ಆಂಗ್ಲ ಮಾಧ್ಯಮ ವಸತಿ ಪ್ರೌಢಶಾಲೆಯಲ್ಲಿ ಆಯೋಜಿಸಿದ್ದ ಕೃಷಿ ಜಾಗೃತಿ ಹಾಗೂ ಮಣ್ಣಿನ ಸೊಗಡು ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿ, ಗದ್ದೆಯಲ್ಲಿ ಕೃಷಿ ಜ್ಞಾನದ ಜತೆಯಲ್ಲಿ ಮಕ್ಕಳು ಸಂಭ್ರಮಿಸುತ್ತಿರುವುದು ವಿಶೇಷ ಅನುಭವ ನೀಡುತ್ತದೆ. ರೈತರ ಪರಿಶ್ರಮದ ಬಗ್ಗೆ ಮಕ್ಕಳಿಗೆ ಮಾಹಿತಿ ನೀಡಬೇಕು. ಮಕ್ಕಳು ನಗರ ಸಂಸ್ಕೃತಿಯತ್ತ ಆಕರ್ಷಿತರಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ಚಟುವಟಿಕೆಗಳು ಅಗತ್ಯ ಎಂದು ತಿಳಿಸಿದರು.

ಸಂಸ್ಥೆ ಅಧ್ಯಕ್ಷ ಕೆ.ಆರ್.ಪ್ರಕಾಶ್ ಮಾತನಾಡಿ, ಮಕ್ಕಳ ಮನಸ್ಸು ಅತ್ಯಂತ ಸೂಕ್ಷ್ಮ. ಕೊಡಚಾದ್ರಿ ಶಾಲೆ ಅನೇಕ ವರ್ಷಗಳಿಂದ ಮಕ್ಕಳಿಗೆ ಪಠ್ಯದ ಜತೆಗೆ ಕಲೆ, ಸಾಹಿತ್ಯ, ಯಕ್ಷಗಾನ, ಯೋಗಾಸನ, ಕರಾಟೆ, ಕೃಷಿ ಕುರಿತು ಅರಿವು ಮೂಡಿಸುತ್ತಿದೆ. 150 ಮಕ್ಕಳು ಕೃಷಿ ಕಲಿಕೆಯಲ್ಲಿ ಪಾಲ್ಗೊಂಡಿದ್ದಾರೆ ಎಂದು ತಿಳಿಸಿದರು.

ಎಂ.ಎನ್.ಮಂಜುನಾಥ್, ವಿರೂಪಾಕ್ಷ, ಜಯರಾಮ ಶೆಟ್ಟಿ, ಪ್ರವೀಣ್, ನಂದಕುಮಾರಿ, ಕೆ.ಟಿ.ಪ್ರಸನ್ನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net