ವರ್ತಕರಿಗೆ ಜಿಎಸ್‌ಟಿ ತಿಳಿವಳಿಕೆ ಅವಶ್ಯ

25 TTH 01
ಕೋಣಂದೂರು ಜೆಸಿ ಆಶ್ರಯದಲ್ಲಿ ಏರ್ಪಡಿಸಿದ್ದ ಜಿಎಸ್‌ಟಿ ಉಪನ್ಯಾಸ ಕಾರ್ಯಕ್ರಮವನ್ನು ಮಧುಸೂದನ ನಾವಡ ಉದ್ಘಾಟಿಸಿದರು. ಸುದರ್ಶನ್, ಕೆ.ಎನ್.ಅವಿನಾಶ್, ವಿಜಯೇಂದ್ರ ಕಾಮತ್ ಇತರರಿದ್ದರು.
Published on

ತೀರ್ಥಹಳ್ಳಿ: ವರ್ತಕರು ವಹಿವಾಟುಗಳ ದಾಖಲಾತಿಗಳ ನಿರ್ವಹಣೆಯೊಂದಿಗೆ ಸರಕು ಸೇವಾ ತೆರಿಗೆಗಳ ಕುರಿತು ಮಾಹಿತಿ ಹೊಂದಬೇಕು ಎಂದು ಲೆಕ್ಕ ಪರಿಶೋಧಕ ಮಧುಸೂದನ ನಾವಡ ಹೇಳಿದರು.

ಕೋಣಂದೂರು ಜೂನಿಯರ್ ಚೇಂಬರ್‌ನಿಂದ ಜಿಎಸ್‌ಟಿ ಕುರಿತು ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಸರಕು ಮತ್ತು ಸೇವಾ ತೆರಿಗೆಗಳ ಕುರಿತು ಉಪನ್ಯಾಸ ನೀಡಿ, ವಾರ್ಷಿಕ 40 ಲಕ್ಷ ರೂ. ಆದಾಯ ಇರುವ ಸರಕುದಾರರು ಹಾಗೂ 20 ಲಕ್ಷ ರೂ. ಆದಾಯ ಇರುವ ಸೇವಾದಾರರು ಜಿಎಸ್‌ಟಿ ಹೊಂದುವುದು ಕಡ್ಡಾಯ ಎಂದು ತಿಳಿಸಿದರು.

ಸರಕು ಸೇವಾ ತೆರಿಗೆಗಳ ಕುರಿತು ಮಾಹಿತಿ ಹೊಂದುವ ಜತೆಯಲ್ಲಿ ಬಹಳ ಮುಖ್ಯವಾಗಿ ವಹಿವಾಟುಗಳ ದಾಖಲಾತಿಗಳ ಕ್ರಮಬದ್ಧ ನಿರ್ವಹಣೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಕಾನೂನು ಪಾಲನೆ ದೃಷ್ಟಿಯಿಂದ ಇಲಾಖೆ ಆಡಿಟ್, ತೆರಿಗೆ ಡಿಮ್ಯಾಂಡ್ ಸಾಧ್ಯತೆ ಹಾಗೂ ನಿಯಮದಂತೆ ಅನುಸರಿಸಬೇಕಾದ ಕ್ರಮಗಳು, ಮೇಲ್ಮನವಿ ಇತ್ಯಾದಿ ವಿಚಾರಗಳ ಕುರಿತು ಮಾಹಿತಿ ಅರಿಯುವ ಅಗತ್ಯವಿದೆ ಎಂದರು.

ಜೂನಿಯರ್ ಚೇಂಬರ್ ಅಧ್ಯಕ್ಷ ಕೆ.ಎನ್.ಅವಿನಾಶ್, ವಲಯ ಉಪಾಧ್ಯಕ್ಷ ತಾಯಿಮನೆ ಸುದರ್ಶನ್, ಲೆಕ್ಕಪರಿಶೋಧಕ ವಿಜಯೇಂದ್ರ ಕಾಮತ್, ಕೋಣಂದೂರು ವರ್ತಕರ ಸಂಘದ ಅಧ್ಯಕ್ಷ ಕೆ.ಆರ್.ಪ್ರಕಾಶ್, ಅಶ್ವತ್ಥ್ ಸಚಿನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net