ಸಾಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಕೆಲವೇ ದಿನಗಳು ಬಾಕಿಯಿದೆ. ವಿದ್ಯಾರ್ಥಿಗಳು ಅಧ್ಯಯನದ ಜತೆಗೆ ಆರೋಗ್ಯದ ಕಡೆಗೂ ಕಾಳಜಿ ವಹಿಸಬೇಕು ಎಂದು ಡಯಟ್ ಪ್ರಾಚಾರ್ಯೆ ಕೆ.ಆರ್.ಬಿಂಬಾ ಹೇಳಿದರು.
2023-24ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಸಾಗರದ ಉರ್ದು ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ತಮ ಫಲಿತಾಂಶ ಪಡೆಯುವ ಗುರಿ ಶಿಕ್ಷಕರ ಜತೆ ವಿದ್ಯಾರ್ಥಿಗಳಿಗೂ ಇರಬೇಕು. ಸರ್ಕಾರಿ ಉರ್ದು ಪ್ರೌಢಶಾಲೆ 7 ವರ್ಷಗಳಿಂದ ಶೇ. 100 ಫಲಿತಾಂಶ ಪಡೆಯುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.
ಬಿಇಒ ಇ.ಪರಶುರಾಮಪ್ಪ ಮಾತನಾಡಿ, ವಿದ್ಯಾರ್ಥಿ ಜೀವನದಲ್ಲಿ ಎಸ್‌ಎಸ್‌ಎಲ್‌ಸಿ ಅತ್ಯಂತ ಮಹತ್ವದ ಘಟ್ಟ. ಅಲ್ಪಸಂಖ್ಯಾತ ಮಕ್ಕಳು ಎಸ್‌ಎಸ್‌ಎಲ್‌ಸಿಯನ್ನು ಹೆಚ್ಚು ಗಮನ ಇರಿಸಿ ಓದಬೇಕು. ಹೆಚ್ಚು ಅಂಕ ಗಳಿಸಿದವರನ್ನು ಸನ್ಮಾನಿಸುವುದರಿಂದ ಇತರರಿಗೂ ಪ್ರೇರಣೆಯಾಗುತ್ತದೆ ಎಂದು ತಿಳಿಸಿದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭೂಮೇಶ್, ಮುಖ್ಯಶಿಕ್ಷಕ ದತ್ತಾತ್ರೇಯ ಎಸ್. ಭಟ್, ಎಸ್‌ಡಿಎಂಸಿ ಅಧ್ಯಕ್ಷ ತಬರೇಜ್ ಅಹ್ಮದ್, ರಮೇಶ್, ಜಬೀವುಲ್ಲಾ, ಎಸ್.ಎನ್.ಪಾಲಾಕ್ಷಪ್ಪ, ಗಣಪತಿ, ಮಕ್ದೂಮ್ ಶಾ, ಗಣೇಶ್ ಟಿ. ನಾಯ್ಕ, ಅಸ್ಮಾ ಕೌಸರ್, ಹೀನಾ ಕೌಸರ್ ಇತರರಿದ್ದರು.