

ಸಾಗರ: ಯೋಗಾಭ್ಯಾಸದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಉತ್ತಮವಾಗುತ್ತದೆ. ಮಕ್ಕಳಿಗೆ ಬಾಲ್ಯದಿಂದಲೇ ಯೋಗಾಭ್ಯಾಸ ಕಲಿಕೆಯಲ್ಲಿ ತೊಡಗಿಸಬೇಕು ಎಂದು ಸಿವಿಲ್ ನ್ಯಾಯಾಧೀಶ ಎಸ್.ನಟರಾಜ್ ಹೇಳಿದರು.
ನಗರದ ಈಡಿಗರ ಸಭಾಭವನದಲ್ಲಿ ಬಳಸಗೋಡು-ಕಾನುಗೋಡು ಶ್ರೀ ಗುರುಕುಲಂ ಯೋಗ ವಿದ್ಯಾಕೇಂದ್ರದಿಂದ ಆಯೋಜಿಸಿದ್ದ ಮೂರು ದಿನಗಳ ರಾಜ್ಯ ಯೋಗಾಸನ ಕ್ರೀಡಾ ಚಾಂಪಿಯನ್ಶಿಪ್ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಸಾವಿರಾರು ವರ್ಷಗಳ ಹಿಂದಿನಿಂದ ಪೂರ್ವಜರು ಯೋಗ ಮಾಡುತ್ತ ಬಂದಿದ್ದರೂ ಅದರ ಮಹತ್ವ ತಿಳಿದಿರಲಿಲ್ಲ. ಉತ್ತಮ ಆರೋಗ್ಯ, ಒತ್ತಡ ನಿಯಂತ್ರಣ ಸೇರಿದಂತೆ ವಿವಿಧ ವಿಷಯಗಳ ಮಹತ್ವ ಅರಿವಾಗುತ್ತಿರುವ ಹಿನ್ನೆಲೆಯಲ್ಲಿ ಯೋಗ ಕಲಿಕೆ ಹೆಚ್ಚುತ್ತಿದೆ. ವಿದೇಶಗಳಲ್ಲೂ ಯೋಗ ಜನಪ್ರಿಯವಾಗಿದೆ. ಜೂ. 21ರಂದು ವಿಶ್ವ ಯೋಗ ದಿನ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳನ್ನು ಮೊಬೈಲ್ನಿಂದ ದೂರ ಇಡಬೇಕು. ಯೋಗಾಸನ, ಕ್ರೀಡಾ ಚಟುವಟಿಕೆಗಳಲ್ಲಿ ಆಸಕ್ತಿ ಬೆಳೆಸಬೇಕು ಎಂದು ಸಲಹೆ ನೀಡಿದರು. ಹರಿಯಾಣದ ಯೋಗ ೆಡರೇಷನ್ ಆ್ ಇಂಡಿಯಾ ಪಂಚಕುಲದ ಸಂಯೋಜನೆಯಲ್ಲಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಬೆಂಗಳೂರು, ಶಿವಮೊಗ್ಗ ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಅಸೋಸಿಯೇಷನ್ ಆಶ್ರಯದಲ್ಲಿ ಸಾಗರದ ಉಚಿತ ಕಾನೂನು ನೆರವು ಸಮಿತಿ ವಿಶೇಷ ಸಹಭಾಗಿತ್ವದಲ್ಲಿ ಚಾಂಪಿಯನ್ಶಿಪ್ ಆಯೋಜಿಸಲಾಗಿದೆ ಎಂದರು.
ಶ್ರೀ ಗುರುಕುಲಂ ಯೋಗ ವಿದ್ಯಾಕೇಂದ್ರದಲ್ಲಿ ಮಕ್ಕಳಿಗೆ ಬಾಲ್ಯದಿಂದಲೇ ಯೋಗ ಕಲಿಸಲಾಗುತ್ತಿದೆ. ಕೇಂದ್ರದ ವಿದ್ಯಾರ್ಥಿಗಳು ರಾಜ್ಯ, ರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸು ಕಂಡಿದ್ದಾರೆ. ಯೋಗ ಮಹತ್ವ ಪರಿಚಯಿಸುವ ಪ್ರಾತ್ಯಕ್ಷಿಕೆಗಳನ್ನು ನಡೆಸಲಾಗುತ್ತಿದೆ. ಮಕ್ಕಳು ಶಿಕ್ಷಣದ ಜತೆ ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ಎಂ.ಎಸ್.ಸಂಧ್ಯಾ ಅಂತರಾಷ್ಟ್ರೀಯ ಯೋಗಪಟು
ಹಿರಿಯ ಪತ್ರಕರ್ತ ಗಣಪತಿ ಶಿರಳಗಿ, ಉದ್ಯಮಿ ಜಲೀಲ್ ಸಾಗರ್, ಯುಪಿಎಸ್ಸಿ ರ್ಯಾಂಕ್ ವಿಜೇತ ವಿ.ವಿಕಾಸ್ ಹಾಗೂ ಬಾಲಪ್ರತಿಭೆ ಎಲ್.ಎಚ್.ಆರ್ವಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 500ಕ್ಕೂ ಹೆಚ್ಚಿನ ಸ್ಪರ್ಧಿಗಳು ಪಾಲ್ಗೊಂಡಿದ್ದರು.
ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ 1978ರಲ್ಲಿ ಆರಂಭಗೊಂಡಿದ್ದು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಿಗೆ ರಾಜ್ಯ ತಂಡವನ್ನು ಕಳುಹಿಸಲಾಗುತ್ತಿದೆ. ರಾಜ್ಯದ ವಿದ್ಯಾರ್ಥಿಗಳು ಅನೇಕ ರಾಷ್ಟ್ರೀಯ ಸ್ಪರ್ಧೆಯಲ್ಲಿ ಗೆದ್ದಿದ್ದಾರೆ. ಜಿ.ಎನ್.ಕೃಷ್ಣಮೂರ್ತಿ ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಅಧ್ಯಕ್ಷ
ಸಿವಿಲ್ ನ್ಯಾಯಾಧೀಶ ಎಂ.ವಿ.ಮಾದೇಶ್, ಆರ್ಯ ಈಡಿಗರ ಸಂಘದ ಕಾರ್ಯದರ್ಶಿ ಪರಮೇಶ್ವರ್, ಸಹ ಕಾರ್ಯದರ್ಶಿ ಕರುಣಾಕರ್, ಜಿಲ್ಲಾ ಅಮೆಚೂರ್ ಯೋಗಾಸನ ಕ್ರೀಡಾ ಅಸೋಸಿಯೇಷನ್ ಅಧ್ಯಕ್ಷ ಕೆ.ಎಸ್.ಗೌತಮ್, ಕರ್ನಾಟಕ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ನ ಅಮರನಾಥ್, ಗಣೇಶ್ಕುಮಾರ್, ಕೆ.ಪಿ.ಲಕ್ಷ್ಮೀನಾರಾಯಣ, ಶ್ರೀ ಗುರುಕುಲಂ ಯೋಗ ವಿದ್ಯಾಕೇಂದ್ರದ ಶ್ರೀಧರಮೂರ್ತಿ, ಕೆ.ಆರ್.ಚಂದನ್, ಸಾನ್ವಿ ಜಿ.ಭಟ್, ರಾಜೇಶ್, ಸಂಧ್ಯಾ, ಪ್ರವೀಣ್ ರಾಯ್ಕರ್ ಮತ್ತಿತರರು ಉಪಸ್ಥಿತರಿದ್ದರು.