ಮರಗಿಡಗಳ ನಾಶದಿಂದ ಭವಿಷ್ಯದಲ್ಲಿ ಆಮ್ಲಜನಕ ಕೊರತೆ

20hos1p parisara
ಹೊಸನಗರ ತಾಲೂಕಿನ ನೂಲಿಗ್ಗೆರಿ ಸರ್ಕಾರಿ ಶಾಲೆಯಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಚಕ್ರವಾಕ ಸುಬ್ರಹ್ಮಣ್ಯ ಉದ್ಘಾಟಿಸಿದರು. ಪ್ರಮೀಳಾ, ವೆಂಕಟೇಶ ಭಟ್, ಫರೀದಾ, ಜ್ಯೋತಿ ಇತರರಿದ್ದರು.
Published on

ಹೊಸನಗರ: ಜನಸಂಖ್ಯೆ ವಿಪರೀತ ಏರಿಕೆ, ಮರಗಿಡಗಳ ನಾಶದಿಂದ ಭವಿಷ್ಯದಲ್ಲಿ ಆಮ್ಲಜನಕ ಕೊರತೆಯಾಗಲಿದೆ ಎಂದು ಜಲತಜ್ಞ ಚಕ್ರವಾಕ ಸುಬ್ರಹ್ಮಣ್ಯ ಹೇಳಿದರು.

ತಾಲೂಕಿನ ನೂಲಿಗ್ಗೆರಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಇಕೋ ಕ್ಲಬ್ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೈಸರ್ಗಿಕ ಸಮತೋಲನ ಕಾಪಾಡುತ್ತ ಬಂದಿರುವ ಪಶ್ಚಿಮಘಟ್ಟ ಬರಿದಾಗುತ್ತಿದೆ. ಬೃಹತ್ ಮರಗಳು ಧರೆಗುರುಳುತ್ತಿವೆ. ಹಳ್ಳಿಗಳು ನಗರಗಳಾಗಿ ಮಾರ್ಪಾಡಾಗುತ್ತಿವೆ. ಆಮ್ಲಜನಕ ನೀಡುತ್ತಿರುವ ಸಮುದ್ರ ಕೂಡ ಮಾಲಿನ್ಯವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಜಪಾನ್, ಕೆನಡಾ ಸೇರಿ ವಿದೇಶಗಳಲ್ಲಿ ಪ್ರತಿ ಪ್ರಜೆಗೆ ಸಾವಿರ ಲೆಕ್ಕದಲ್ಲಿ ಮರಗಳಿವೆ. ಆದರೆ ಭಾರತದಲ್ಲಿ ಪ್ರತಿ ವ್ಯಕ್ತಿಗೆ ಸರಾಸರಿ 28 ಮರಗಳಿವೆ. ಜಪಾನ್ ದೇಶದಲ್ಲಿ ಶೇ. 65ರಷ್ಟು ಕಾಡು ಇದ್ದು, ಆದರೆ ಭಾರತದಲ್ಲಿ ಶೇ. 22ರಷ್ಟು ಕಾಡು ಇದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಆದರೆ ವಾಸ್ತವವಾಗಿ ಶೇ. 12ರಷ್ಟು ಮಾತ್ರ ಅರಣ್ಯ ಪ್ರದೇಶವಿದೆ. ಜೀವವೈವಿಧ್ಯತೆ ಹೊಂದಿದ ಭಾರತದ ಹಿರಿಮೆ ಹಂತ ಹಂತವಾಗಿ ಕಡಿಮೆಯಾಗುತ್ತಿದೆ. ಮಕ್ಕಳ ಉತ್ತಮ ಭವಿಷ್ಯಕ್ಕೆ ಉತ್ತಮ ಪರಿಸರ ಬೇಕು. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಬಿಟ್ಟು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ತಿಳಿಸಿದರು.

ಪರಿಸರ ಕುರಿತ ರಸಪ್ರಶ್ನೆಯಲ್ಲಿ ಉತ್ತಮ ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮುಖ್ಯಶಿಕ್ಷಕಿ ಪ್ರಮೀಳಾ, ಹಿರಿಯ ವಿದ್ಯಾರ್ಥಿಗಳ ಸಂಘದ ಖಜಾಂಚಿ ವೆಂಕಟೇಶ ಭಟ್, ಶಿಕ್ಷಕರಾದ ಫರೀದಾ, ಜ್ಯೋತಿ, ಆಶಿಕ್, ಮಂಜುನಾಥ, ಮೀನಾಕ್ಷಿ, ಸುಮಿತ್ರಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net