ಸೊರಬ: ಹೆತ್ತ ತಂದೆ ತಾಯಿಯನ್ನು ಮಕ್ಕಳು ಪೋಷಣೆ ಮಾಡದೆ ಇರುವ ಸ್ಥಿತಿ ಇದ್ದು, ಸಮಾಜದಲ್ಲಿ ವೃದ್ಧಾಶ್ರಮ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಕಲ್ಲಪ್ಪ ಚಿತ್ರಟ್ಟೆಹಳ್ಳಿ ಹೇಳಿದರು.
ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪಾಲಕರನ್ನು ಪೋಷಣೆ ಮಾಡದೆ ಇರುವ ಮಕ್ಕಳಿಗೆ ಯಾವುದೆ ಸೌಲಭ್ಯಗಳು ದೊರೆಯುವುದಿಲ್ಲ ಎಂಬ ಆದೇಶ ಜಾರಿಯಾಗಬೇಕು ಎಂದು ತಿಳಿಸಿದರು.
ಶ್ರೀ ಸಾಯಿ ವೃದ್ಧಾಶ್ರಮದ ಕಾರ್ಯದರ್ಶಿ ಆರ್.ರಾಮಪ್ಪ ಮಾತನಾಡಿ, ವೃದ್ಧರು, ಅನಾಥರ ಸೇವೆಯು ದೇವರ ಸೇವೆ ಮಾಡಿದಂತೆ. ನಮ್ಮ ತಂದೆ ತಾಯಿಯನ್ನು ನೋಡಿಕೊಂಡ ಹಾಗೆ ಪೋಷಣೆ ಮಾಡುತ್ತಿರುವುದು ನನಗೆ ತೃಪ್ತಿ ತಂದಿದೆ ಎಂದರು.
ನವಚೇತನ ಬುದ್ದಿಮಾಂದ್ಯ ವಸತಿ ಶಾಲೆ ಮಕ್ಕಳಿಗೆ ನಿವೃತ್ತ ನೌಕರರಾದ ಗೊಂದಿ ಮಲ್ಲಮ್ಮ, ಓಟೂರು ಚಂದ್ರಪ್ಪ ಹಾಗೂ ಪಕ್ಕೀರಸ್ವಾಮಿ ಸಾರೆಕೊಪ್ಪ ಅವರು ಉಚಿತವಾಗಿ ಆಹಾರ ಸಾಮಗ್ರಿ, ಬಟ್ಟೆ, ಹೊದಿಕೆ ನೀಡಿದರು.
ಕುವೆಂಪು ವಿವಿ ನಿವೃತ್ತ ಹಣಕಾಸು ಅಧಿಕಾರಿ ಜಿ.ಬಂಗಾರಪ್ಪ, ಏಕಾಂತಪ್ಪ, ಮೋಹನ್‌ದಾಸ್, ಶಿವಪ್ಪ, ಶಿವಲಿಂಗಪ್ಪ, ಬಸವಂತಪ್ಪ, ಜಾವೂರ್, ಪ್ರಕಾಶ್ ಕಾಸರ್, ಶಶಿಕುಮಾರ್, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ಇದ್ದರು.