ಸೊರಬ: ಪಟ್ಟಣದ ಶ್ರೀ ಬಯಲು ಬಸವೇಶ್ವರ ಸ್ವಾಮಿ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಬೆಳಗ್ಗೆ ಬತ್ತಿಕೊಪ್ಪದ ಪುರವಂತರಾದ ಮಹೇಶ್ವರ ಗೌಡ, ಹನುಮಂತ ಗೌಡ ಸಂಗಡಿಗರಿಂದ ಶ್ರೀ ವೀರಭದ್ರ ದೇವರ ಶರಭಿ ಗುಗ್ಗಳ, ಮಲ್ಲಿಕಾರ್ಜುನ ಸ್ವಾಮಿ ಅರಮನೆಮಠ ಹಾಗೂ ಅರ್ಚಕ ಕೊಟ್ರೇಶಯ್ಯ ಪೌರೋಹಿತ್ಯದಲ್ಲಿ ಶ್ರೀ ಬಸವೇಶ್ವರ ಸ್ವಾಮಿ ಮಹಾರಥೋತ್ಸವ ನಡೆಯಿತು. ನಂತರ ತೀರ್ಥ ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ನಡೆಯಿತು.
ಶ್ರೀ ಬಯಲು ಬಸವೇಶ್ವರ ಸ್ವಾಮಿಗೆ ಪಟ್ಟಣ ಸೇರಿ ಕೊಡಕಣಿ, ಹಿರೇಶಕುನ, ಚಿಕ್ಕಶಕುನ ಸುತ್ತಮುತ್ತಲಿನ ಗ್ರಾಮಸ್ಥರು ಪೂಜೆ ಸಲ್ಲಿಸಿದರು. ಜಾತ್ರಾ ಮಹೋತ್ಸವ ಅಂಗವಾಗಿ ಫೆ.7ರಿಂದಲೇ ಕಂಕಣಧಾರಣೆ, ಪ್ರತಿದಿನ ಉತ್ಸವ ಪೂಜೆ, ಮಂಗಳಾರತಿ, ಫೆ.11ರಂದು ಶ್ರೀ ಘನಬಸವ ಅಮರೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದ ವಾರ್ಷಿಕೋತ್ಸವ, ಬಸವೇಶ್ವರ ದೇವರಿಗೆ ರುದ್ರಾಭಿಷೇಕ, ಪುಷ್ಪಕ ರಥೋತ್ಸವ ಜರುಗಿತು.