ಸೊರಬ: ಹೈನುಗಾರಿಕೆ ಕೃಷಿಗೆ ಪೂರಕ. ಪಶುಸಂಗೋಪನೆಯಿಂದ ಪ್ರತಿ ಕುಟುಂಬವೂ ಆರ್ಥಿಕ ಪ್ರಗತಿ ಹೊಂದಲು ಸಾಧ್ಯ ಎಂದು ಶಿಮುಲ್ ನಿರ್ದೇಶಕ ದಯಾನಂದ ಗೌಡ ಹೇಳಿದರು.
ತಾಲೂಕಿನ ಶಕುನವಳ್ಳಿ ಗ್ರಾಪಂನ ತುಯಿಲಕೊಪ್ಪ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ ಏರ್ಪಡಿಸಿದ್ದ ಮಿಶ್ರತಳಿ ಹಸು, ಮಣಕ ಮತ್ತು ಕರುಗಳ ಪ್ರದರ್ಶನ, ಬರಡು ಜಾನುವಾರು ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹೈನುಗಾರಿಕೆಯಿಂದ ರೈತರು ಲಾಭ ಗಳಿಸಬಹುದು ಎಂದು ತಿಳಿಸಿದರು.
ತಾಪಂ ಮಾಜಿ ಅಧ್ಯಕ್ಷ ಸದಾನಂದ ಗೌಡ ಮಾತನಾಡಿ, ಕೃಷಿ ಚಟುವಟಿಕೆ ಜತೆಗೆ ಹೈನುಗಾರಿಕೆಯನ್ನು ಉಪವೃತ್ತಿಯಾಗಿ ಮಾಡಿಕೊಳ್ಳಬೇಕು. ಇದರಿಂದ ಬರುವ ಲಾಭದಲ್ಲಿ ಕುಟುಂಬ ನಿರ್ವಹಣೆ ಸಾಧ್ಯವಾಗಲಿದೆ ಎಂದರು.
ಶಕುನವಳ್ಳಿ ಗ್ರಾಪಂ ಅಧ್ಯಕ್ಷೆ ಶಂಶಾದ್ ಬಾನು ಮುಕ್ತಿಯಾರ್, ತಾಪಂ ಇಒ ಡಾ. ಎನ್.ಅರ್ ಪ್ರದೀಪ್‌ಕುಮಾರ್, ಕೆಎಂಎಫ್ ಉಪವ್ಯವಸ್ಥಾಪಕ ಹರೀಶ್ ಕರಿಗೌಡ, ಗ್ರಾಪಂ ಉಪಾಧ್ಯಕ್ಷ ರಮೇಶ್ ನಾಡಿಗೇರ್, ಗ್ರಾಪಂ ಸದಸ್ಯರು, ಪಶು ವೈದ್ಯರು ಮತ್ತಿತರರು ಇದ್ದರು.