ಪಂಚ ಪರಿವರ್ತನಾ ಕಾರ್ಯಗಳ ಅರಿವು

12hos1p rss
ಹೊಸನಗರದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಕಾರ್ಯಕ್ರಮದಲ್ಲಿ ಕೇಶವ್ ಸಂಪೆಕೈ, ಜಿ.ವಿ.ರಾಜೇಶ, ಆರಗ ಜ್ಞಾನೇಂದ್ರ, ಶ್ಯಾಮ್‌ಸುಂದರ್ ಇತರರು ಪಾಲ್ಗೊಂಡಿದ್ದರು.
Published on

ಹೊಸನಗರ: ಪಟ್ಟಣದಲ್ಲಿ ಆರ್‌ಎಸ್‌ಎಸ್ ಪಥಸಂಚಲನ ಮತ್ತು ಬೌದ್ಧಿಕ್ ಕಾರ್ಯಕ್ರಮ ನಡೆಯಿತು.

ನಗರ ಮತ್ತು ಕಸಬಾ ಹೋಬಳಿ ಗಣವೇಷಧಾರಿ ಸ್ವಯಂಸೇವಕರು ದ್ಯಾವರ್ಸಾದಿಂದ ಹಾಗೂ ಕೆರೆಹಳ್ಳಿ, ಹುಂಚ ಹೋಬಳಿಯವರು ಮಾವಿನಕೊಪ್ಪ ಸರ್ಕಲ್ನಿಂದ ಹೊರಟು ಮುಖ್ಯ ಮಾರ್ಗವಾಗಿ ಬಂದು ಹಳೇ ಕೋರ್ಟ್ ಸರ್ಕಲ್ ಬಳಿ ಸಂಗಮಗೊಂಡ ಬಳಿಕ ಬಸ್ ನಿಲ್ದಾಣದವರೆಗೆ ಆಕರ್ಷಕ ಪಥಸಂಚಲನ ನಡೆಸಿದರು.

ಪಥಸಂಚಲನ ಮಾರ್ಗದ ಪ್ರತಿ ಮನೆ ಮುಂಭಾಗದಲ್ಲೂ ರಂಗೋಲಿಗಳಿಂದ ಶೃಂಗರಿಸಿ, ಭಗವಾಧ್ವಜ ಮತ್ತು ಸ್ವಯಂಸೇವಕರ ಮೇಲೆ ಪುಷ್ಪಾರ್ಚನೆ ಮಾಡಿ ಸ್ವಾಗತಿಸಿದರು.

ಕರ್ನಾಟಕ ಪ್ರಾಂತ ಸಾಮರಸ್ಯ ಗತಿವಿಧಿ ಸಹ ಸಂಯೋಜಕ ರಾಜೇಶ್, ಸಂಘ ಸ್ಥಾಪನೆ ಹಿನ್ನೆಲೆ ಮತ್ತು ಸಂಘ ಬೆಳೆದು ಬಂದ ಹಾದಿ ಜತೆಯಲ್ಲಿ ಪಂಚ ಪರಿವರ್ತನಾ ಕಾರ್ಯಗಳ ಬಗ್ಗೆ ವಿಶೇಷವಾಗಿ ಮಾಹಿತಿ ನೀಡಿದರು.

ಪುಟಿದು ಚಿಮ್ಮುತಿದೆ ಅಂತಃಶಕ್ತಿಯು ಹೃದಯದೊಳಗಿನಿಂದ ಎಂಬ ಗೀತೆಯನ್ನು ಹಾಡಿದರು. ಕಾರ್ಯಕ್ರಮದಲ್ಲಿ 534 ಗಣವೇಷಧಾರಿ ಸ್ವಯಂಸೇವಕರು ಪಾಲ್ಗೊಂಡಿದ್ದರು. ಜಿಲ್ಲಾ ಸಂಘಚಾಲಕ ಕೇಶವ ಸಂಪೆಕೈ, ಹೊಸನಗರ ತಾಲೂಕು ಸಂಘಚಾಲಕ ಶ್ಯಾಮ್ ಸುಂದರ್, ತಾಲೂಕು ಕಾರ್ಯವಾಹ ಅಶ್ವತ್ಥ, ವ್ಯವಸ್ಥಾ ಪ್ರಮುಖ್ ರಮೇಶ್, ಶಾಸಕ ಆರಗ ಜ್ಞಾನೇಂದ್ರ, ಜಿಲ್ಲಾ ಮತ್ತು ತಾಲೂಕು ಬಿಜೆಪಿ, ಸಂಘಪರಿವಾರದ ಮುಖಂಡರು ಗಣವೇಷಧಾರಿಗಳಾಗಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net