

ಸೊರಬ: ಹಬ್ಬಗಳು ನಾಡಿನ ವೈಚಾರಿಕ, ಸಾಹಿತ್ಯಕ ಮತ್ತು ಸಾಂಸ್ಕೃತಿಕ ಮಹತ್ವ ಸಾರುತ್ತವೆ ಎಂದು ಸಮಾಜ ಸೇವಕ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.
ಪಟ್ಟಣದ ದುರ್ಗಾಂಬಾ ದೇವಾಲಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಬನದಕೊಪ್ಪ ಮತ್ತು ಮಳಲಗದ್ದೆ ತಂಡದಿಂದ ದೀಪಾವಳಿ ಹಬ್ಬದ ನಿಮಿತ್ತ ಹಮ್ಮಿಕೊಂಡಿದ್ದ ಅಂಟಿಕೆ-ಪಿಂಟಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪ್ರಕೃತಿ ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಋತುಮಾನಕ್ಕೆ ಅನುಗುಣವಾಗಿ ಹಬ್ಬಗಳು ಬರುತ್ತವೆ. ನಮ್ಮ ಆಹಾರದಲ್ಲಿಯೂ ಬದಲಾವಣೆ ಮಾಡಿಕೊಂಡಿದ್ದೇವೆ. ಅಂಟಿಕೆ-ಪಿಂಟಿಕೆ ಮೂಲಕ ಹಬ್ಬದ ಧಾರ್ಮಿಕ ಮಹತ್ವ ಸಾರುತ್ತಿರುವುದು ವೈಶಿಷ್ಟೃವಾಗಿದೆ ಎಂದು ತಿಳಿಸಿದರು.
ಪುರಸಭೆ ಮಾಜಿ ಉಪಾಧ್ಯಕ್ಷ ಮಧುರಾಯ್ ಜಿ. ಶೇಟ್, ಕಸಾಪ ತಾಲೂಕು ಅಧ್ಯಕ್ಷ ಷಣ್ಮುಖಾಚಾರ್, ಉಪನ್ಯಾಸಕ ರವಿ ಕಲ್ಲಂಬಿ, ವಕೀಲ ಪ್ರಶಾಂತ್, ರಮೇಶ್, ಲಿಂಗರಾಜ್, ಮಹೇಶ್ ಖಾರ್ವಿ, ರಾಘವೇಂದ್ರ, ಅರುಣ್‌ಕುಮಾರ್, ಮೋಹನ್, ಈರಪ್ಪ ಮಾಸ್ಟರ್, ಸುಬ್ರಹ್ಮಣ್ಯ ಗುಡಿಗಾರ್, ರೇವಣಪ್ಪ ಇತರರಿದ್ದರು.