ಭದ್ರಾವತಿ: ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ದಿನಾಂಕವನ್ನು ಹೋಲುವ 10 ರೂ. ಮುಖಬೆಲೆ ನೋಟು ಸಂಗ್ರಹಿಸುವ ಮೂಲಕ ಅಂಚೆ ಚೀಟಿ ಸಂಗ್ರಹಕಾರ ಗಣೇಶ್ ಅವರು ದಿ. ಎಸ್.ಎಂ.ಕೃಷ್ಣ ಅವರಿಗೆ ಸಂತಾಪ ಸೂಚಿಸಿದ್ದಾರೆ.
ಗಣೇಶ್ ಪಿಗ್ಮಿ ಸಂಗ್ರಾಹಕರಾಗಿದ್ದು, ಸಮಾಜದ ಗಣ್ಯ ವ್ಯಕ್ತಿಗಳಿಗೆ ಸಂಬಂಧಿಸಿದ ಜನನ ಮತ್ತು ಮರಣ ದಿನಾಂಕಗಳನ್ನು ಹೋಲುವ ನೋಟು ಸಂಗ್ರಹಿಸುವ ಹವ್ಯಾಸವನ್ನು ಹಲವಾರು ವರ್ಷಗಳಿಂದ ಹೊಂದಿದ್ದಾರೆ.
ಎಸ್.ಎಂ.ಕೃಷ್ಣ ಅವರ ನಿಧನ ದಿನಾಂಕವಾದ 10-12-2024 ಹೋಲುವ 10 ರೂ. ಮುಖ ಬೆಲೆಯ ನೋಟು ಸಂಗ್ರಹಿಸಿದ್ದಾರೆ.