More

    ಆಗಸ್ಟ್​ 7ಕ್ಕೆ ಜೀ5ನಲ್ಲಿ ‘ಶಿವಾಜಿ ಸುರತ್ಕಲ್​’ ಬಿಡುಗಡೆ

    ರಮೇಶ್​ ಅರವಿಂದ್​ ಅಭಿನಯದ ‘ಶಿವಾಜಿ ಸುರತ್ಕಲ್​’ ಈ ವರ್ಷದ ಫೆಬ್ರವರಿಯಲ್ಲಿ ಬಿಡುಗಡೆಯಾಗಿತ್ತು. ಒಳ್ಳೆಯ ಪ್ರತಿಕ್ರಿಯೆ ಮತ್ತು ವಿಮರ್ಶೆಗಳು ಸಹ ಸಿಕ್ಕಿತ್ತು. ಇನ್ನೇನು ಚಿತ್ರ ಯಶಸ್ವಿ ಪ್ರದರ್ಶನ ಕಾಣಬೇಕು ಎನ್ನುವಷ್ಟರಲ್ಲಿ ಕರೊನಾ ಬಂದು ಚಿತ್ರ ಪ್ರದರ್ಶನವೇ ರದ್ದಾಗಿ ಹೋಯಿತು.

    ಈ ಮಧ್ಯೆ ‘ಶಿವಾಜಿ ಸುರತ್ಕಲ್​’ ಚಿತ್ರವನ್ನು ಓವರ್​ ದಿ ಟಾಪ್​ನಲ್ಲಿ (ಓಟಿಟಿ) ಬಿಡುಗಡೆ ಮಾಡಬೇಕು, ಚಾನಲ್​ಗಳಲ್ಲಿ ಪ್ರದರ್ಶಿಸಬೇಕು ಎಂಬ ಒತ್ತಾಯ ಜನರಿಂದ ಬಂದಿತ್ತಾದರೂ ಚಿತ್ರ ಇದುವರೆಗೂ ಓಟಿಟಿಯಲ್ಲಾಗಲೀ, ಟಿವಿಯಲ್ಲಾಗಲೀ ಬಿಡುಗಡೆಯಾಗಿಲ್ಲ.

    ಇದನ್ನೂ ಓದಿ: ಕಾರು ಅಪಘಾತದಲ್ಲಿ ಗಾಯಗೊಂಡು ನಟಿ ರಿಷಿಕಾ ಸಿಂಗ್ ಆಸ್ಪತ್ರೆಗೆ ದಾಖಲು​

    ಇದೀಗ ಚಿತ್ರದ ಓಟಿಟಿ ಬಿಡುಗಡೆಗೆ ಕೊನೆಗೂ ಮುಹೂರ್ತ ಫಿಕ್ಸ್​ ಆಗಿದೆ. ‘ಶಿವಾಜಿ ಸುರತ್ಕಲ್​’ ಆಗಸ್ಟ್​ 7ರಂದು ಜೀ5ನಲ್ಲಿ ಅಧಿಕೃತವಾಗಿ ಬಿಡುಗಡೆಯಾಗಲಿದೆ. ಇದಾಗಿ ಕೆಲವು ದಿನಗಳ ನಂತರ ಜೀ ಕನ್ನಡದಲ್ಲೂ ಬಿಡುಗಡೆಯಾಗಲಿದೆ.

    ‘ಶಿವಾಜಿ ಸುರತ್ಕಲ್​ – ರಣಗಿರಿ ರಹಸ್ಯ’ ಚಿತ್ರವು ಒಂದು ಪತ್ತೇದಾರಿ ಚಿತ್ರವಾಗಿದ್ದು, ಶಿವಾಜಿ ಸುರತ್ಕಲ್​ ಎಂಬ ಪತ್ತೇದಾರನ ಸಾಹಸಗಳನ್ನು ಹೇಳುತ್ತದೆ. ಪ್ರಸಿದ್ಧ ಪತ್ತೇದಾರಿ ಕಾದಂಬರಿಕಾರ್ತಿ ಅಗಾತ ಕ್ರಿಸ್ಟಿ ಅವರ ‘ಮರ್ಡರ್​ ಆನ್​ ದಿ ಒರಿಯಂಟೆಲ್​ ಎಕ್ಸ್​ಪ್ರೆಸ್​’ ಎಂಬ ಕಾದಂಬರಿಯಿಂದ ಸ್ಫೂರ್ತಿ ಪಡೆದು ಈ ಚಿತ್ರವನ್ನು ರೂಪಿಸಲಾಗಿದೆ.

    ಈ ಹಿಂದೆ ‘ಬದ್ಮಾಶ್​’ ಚಿತ್ರವನ್ನು ನಿರ್ದೇಶಿಸಿದ್ದ ಆಕಾಶ್​ ಶ್ರೀವತ್ಸ ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದಲ್ಲಿ ರಮೇಶ್​ ಅರವಿಂದ್​ ಜತೆಗೆ ರಾಧಿಕಾ ನಾರಾಯಣ್​, ಆರೋಹಿ ನಾರಾಯಣ್​ ಮುಂತಾದವರು ಅಭಿನಯಿಸಿದ್ದಾರೆ.

    ಇದನ್ನೂ ಓದಿ: ಬಿಗ್​ಬಾಸ್​ ಶೋ ಪ್ರತಿ ಎಪಿಸೋಡ್​ಗೆ ನಾಗಾರ್ಜುನ್​ ಪಡೆಯುವ ಸಂಭಾವನೆ ಕೇಳಿದ್ರೆ ಶಾಕ್​ ಆಗ್ತಿರಾ!

    ಈಗಾಗಲೇ ಈ ಚಿತ್ರದ ಹಿಂದಿ ರೀಮೇಕ್​ ಹಕ್ಕುಗಳು ಮತ್ತು ಉತ್ತರ ಭಾರತದ ಡಬ್ಬಿಂಗ್ ಹಕ್ಕುಗಳನ್ನು ಬಾಲಿವುಡ್​ನ ಜನಪ್ರಿಯ ಪ್ರೊಡಕ್ಷನ್​ ಸಂಸ್ಥೆಯೊಂದು ಪಡೆದಿದ್ದು, ಮುಂದಿನ ದಿನಗಳಲ್ಲಿ ಚಿತ್ರವು ಹಿಂದಿಯಲ್ಲಿ ರೀಮೇಕ್​ ಆಗುವ ಸಾಧ್ಯತೆ ಇದೆ.

    ಇದಲ್ಲದೆ ತೆಲುಗು ಮತ್ತು ತಮಿಳಿಗೂ ರೀಮೇಕ್​ ಆಗುವ ಬಗ್ಗೆ ಮಾತುಕಥೆ ನಡೆದಿದ್ದು, ಸದ್ಯದಲ್ಲೇ ಈ ಬಗ್ಗೆ ಹೆಚ್ಚಿನ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.

    ಚಂದನವನದ ಸಭೆಗೆ ಜಗ್ಗೇಶ್​ ಯಾಕೆ ಹೋಗಲಿಲ್ಲ? ಇಲ್ಲಿದೆ ಕಾರಣ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts