ಕಾರವಾರ ತೀರದ ಸಮೀಪ ಹಡಗಿಗೆ ಬೆಂಕಿ

Ship fire
Published on

ಕಾರವಾರ: ತೀರದಿಂದ 50 ನಾಟಿಕಲ್ ಮೈಲ್ ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ವಾಣಿಜ್ಯ ಹಡಗೊಂದಕ್ಕೆ ಬೆಂಕೆ ಹೊತ್ತಿಕೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಎಂವಿ ಮೈರಿಸ್ ಫ್ರಾಂಕ್ ಫರ್ಟ್ ಹೆಸರಿನ ಹಡಗಿಗೆ ಶುಕ್ರವಾರ ಬೆಂಕಿ ತಗುಲಿತ್ತು. ಮುಂಬೈನಿಂದ ಭಾರತೀಯ ತಟ ರಕ್ಷಕ ಪಡೆಯ ಐಸಿಜಿ ಡ್ರೋನಿಯರ್, ಸಚೇತ್, ಸುಜೀತ್ ಮತ್ತು ಸಮರ್ಥ ಬೋಟ್ ಗಳು, ಎಎಲ್ ಎಚ್ ಹೆಲಿಕಾಫ್ಟರ್ ಗಳು ರಕ್ಷಣಾ ಕಾರ್ಯಾಚರಣೆಗೆ ತೆರಳಿವೆ.
ಪನಾಮಾ ಧ್ವಜದ ಹಡಗಾಗಿದ್ದು, ಗುಜರಾತ್ ನ ಮುಂದ್ರಾ ಬಂದರಿನಿಂದ ಶ್ರೀಲಂಕಾಲದ‌ ಕೊಲಂಬೊ ಬಂದರಿಗೆ ತೆರಳುತ್ತಿತ್ತು ಎನ್ನಲಾಗಿದೆ.
ಅಪಾಯಕಾರಿಯಾದ ಸಾಮಗ್ರಿಗಳು ಇದ್ದವು ಬೆಂಕಿಯನ್ನು ನಂದಿಸುವ ಕಾರ್ಯಗಳು ನಡೆದಿವೆ. ಹಡಗಿನಲ್ಲಿದ್ದ ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟ್ ಗಾರ್ಡ್ ತನ್ನ ಎಕ್ಸ್ ಖಾತೆಯಲ್ಲಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net