ಮಹಿಳೆಗೆ ಹಣವಿರುವ ಬ್ಯಾಗ್​ ಮರಳಿಸಿ ಪ್ರಾಮಾಣಿಕತೆ ಮೆರೆದ ಶಿವಮೊಗ್ಗದ ಆಟೋ ಚಾಲಕ

ahimoga auto driver
Published on

ಶಿವಮೊಗ್ಗ: ಹಣವಿರುವ ಬ್ಯಾಗನ್ನು ಆಟೋದಲ್ಲೇ ಬಿಟ್ಟುಹೋಗಿದ್ದ ಮಹಿಳೆಗೆ ಬ್ಯಾಗ್​ ಮರಳಿಸುವ ಮೂಲಕ ಆಟೋ ಚಾಲಕ ನಾಗರಾಜ್​ ಪ್ರಾಮಾಣಿಕತೆ ಮೆರೆದಿದ್ದಾರೆ.

ಮಂಗಳವಾರ ಬೆಳಗ್ಗೆ ಚನ್ನಗಿರಿ ತಾಲೂಕು ತಾವರೆಕೆರೆಯ ಮೊಹಸಿನ್​ ಎಂಬಾಕೆ ಶಿವಮೊಗ್ಗಕ್ಕೆ ಬಸ್​ನಲ್ಲಿ ಬಂದಿಳಿದಿದ್ದಾರೆ. ನಾಗರಾಜ್​ ಅವರ ಆಟೋದಲ್ಲಿ ಆಕೆ ತಿಲಕನಗರದ ಆಸ್ಪತ್ರೆಯೊಂದಕ್ಕೆ ಪ್ರಯಾಣಿಸಿದ್ದು ಆಟೋ ಇಳಿಯುವಾಗ 8,500 ರೂ. ನಗದು ಇರಿಸಿದ್ದ ಪರ್ಸ್​ ಹಾಗೂ ಬ್ಯಾಗನ್ನು ಆಟೋದಲ್ಲಿ ಬಿಟ್ಟುಹೋಗಿದ್ದಾರೆ.

ಕೆಲ ಸಮಯದ ಬಳಿಕ ಬ್ಯಾಗ್​ ಅನ್ನು ಗಮನಿಸಿದ ನಾಗರಾಜ್​, ಸಂಚಾರ ಠಾಣೆ ಪೊಲೀಸರಿಗೆ ಬ್ಯಾಗ್​ ಒಪ್ಪಿಸಿ ಮಹಿಳೆ ಆಸ್ಪತ್ರೆ ಹೋಗಿದ್ದನ್ನು ತಿಳಿಸಿದರು. ಇದಿಷ್ಟು ನಡೆದ ಕೆಲವೇ ತಾಸಿನಲ್ಲಿ ಮಹಿಳೆಯನ್ನು ಪತ್ತೆ ಮಾಡಿದ ಪೊಲೀಸರು ಠಾಣೆಗೆ ಕರೆಸಿಕೊಂಡಿದ್ದಾರೆ. ಅತ್ತ ನಾಗರಾಜ್​ ಅವರನ್ನೂ ಕರೆಸಿಕೊಂಡು ಅವರ ಮೂಲಕವೇ ಮಹಿಳೆಗೆ ಬ್ಯಾಗ್​ ಮರಳಿಸಿದ್ದಾರೆ. ಟ್ರಾಫಿಕ್​ ಪೊಲೀಸ್​ ಇನ್ಸ್​ಪೆಕ್ಟರ್​ ಸಂತೋಷ್​ಕುಮಾರ್​ ಸಮ್ಮುಖದಲ್ಲಿ ಮಹಿಳೆಗೆ ಹಣವಿದ್ದ ಬ್ಯಾಗ್​ ಅನ್ನು ನಾಗರಾಜ್​ ಮರಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net