

ಸುಬ್ರಹ್ಮಣ್ಯ(ದ.ಕ.): ಕೆಲವು ತಿಂಗಳ ಹಿಂದೆ ಕುಕ್ಕೆ ಸುಬ್ರಹ್ಮಣ್ಯದಿಂದ ಹಳೆಯ ಸ್ಕೂಟರಲ್ಲಿ ದೇಶ ಸುತ್ತಿದ ತಾಯಿ ಹಾಗೂ ಮಗ ಪಯಣ ಮುಗಿಸಿ ಮಂಗಳವಾರ ಮತ್ತೆ ದೇವಸ್ಥಾನಕ್ಕೆ ಆಗಮಿಸಿ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು.
ಮೈಸೂರಿನ ಕೃಷ್ಣಕುಮಾರ್(44) ತನ್ನ ತಾಯಿ ಚೂಡರತ್ನಮ್ಮ(72) ಜತೆ ಹಳೇ ಸ್ಕೂಟರ್ನಲ್ಲಿ ದೇಶಾದ್ಯಂತ ಸಂಚರಿಸಿದ್ದರು. ತಾಯಿ ಜತೆ ಧಾರ್ಮಿಕ ಕ್ಷೇತ್ರಗಳ ಸುತ್ತಾಟ ಆರಂಭಿಸಿದ್ದ ಕೃಷ್ಣ ಕುಮಾರ್, ಆಗಸ್ಟ್ನಲ್ಲಿ ಕುಕ್ಕೆ ಸುಬ್ರಹ್ಮಣ್ಯದಿಂದ ತಮ್ಮ ಪಯಣ ಆರಂಭಿಸಿ ಧರ್ಮಸ್ಥಳ, ಪುತ್ತೂರು, ವಿಟ್ಲ ಬಳಿಕ ಕೇರಳ, ತಮಿಳುನಾಡು, ರಾಮೇಶ್ವರ, ಕನ್ಯಾಕುಮಾರಿ ಮೊದಲಾದ ಹಲವು ಕ್ಷೇತ್ರಗಳನ್ನು ಸಂದರ್ಶಿಸಿದ್ದರು. ಸುಮಾರು 63,449 ಕಿಲೋಮೀಟರ್ ಸುತ್ತಾಡಿದ್ದಾರೆ.
2018ರಲ್ಲಿಯೂ ತಾಯಿ ಜತೆ ಮೈಸೂರಿನಿಂದ ಸ್ಕೂಟರ್ನಲ್ಲಿ ಪ್ರವಾಸ ಆರಂಭಿಸಿದ್ದ ಇವರು ನೇಪಾಳ, ಭೂತಾನ್, ಮ್ಯಾನ್ಮಾರ್ ಸುತ್ತಿದ್ದರು. ಆ ಸಂದರ್ಭ ಕರೊನಾ ವ್ಯಾಪಿಸಿದ ಹಿನ್ನೆಲೆಯಲ್ಲಿ ಸುತ್ತಾಟ ಅರ್ಧದಲ್ಲೇ ಸ್ಥಗಿತಗೊಳಿಸಿದ್ದರು.