ಧರ್ಮ ಜಾಗೃತಿಯಿಂದ ಸಂಸ್ಕೃತಿ ಉದ್ದೀಪನ : ಉದ್ಯಮಿ ನಿತಿನ್ ಕೆ.ಶೆಟ್ಟಿ ದೃಢವಿಶ್ವಾಸ

friends
Published on

ಮೂಲ್ಕಿ: ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆಯ ಜತೆಗೆ ಸಂಸ್ಕಾರ ಮತ್ತು ಸಂಸ್ಕೃತಿ ಮೂಡಿಸುವುದು ಅಗತ್ಯ. ಕ್ರೀಡಾಕೂಟದಿಂದ ಮಕ್ಕಳಲ್ಲಿ ಧನಾತ್ಮಕ ಶಕ್ತಿ ನಿರ್ಮಾಣವಾಗಿ ದೈಹಿಕ ಹಾಗೂ ಶಾರೀರಿಕ ಬೆಳವಣಿಗೆ ಸಾಧ್ಯ. ಧರ್ಮ ಜಾಗೃತಿ ಮೂಲಕ ಸಂಸ್ಕಾರ ಮತ್ತು ಸಂಸ್ಕೃತಿ ಉಳಿಸಲು ಪ್ರಯತ್ನಿಸೋಣ ಎಂದು ಉದ್ಯಮಿ ನಿತಿನ್ ಕೆ.ಶೆಟ್ಟಿ ಹೇಳಿದರು.

ಪಂಜಿನಡ್ಕ ಫ್ರೆಂಡ್ಸ್ ಹಾಗೂ ಶ್ರೀ ಆದಿ ಜನಾರ್ದನ ಸೇವಾ ಯುವಕ ಮಂಡಲ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಆವರಣದಲ್ಲಿ ಇತ್ತೀಚೆಗೆ ನಡೆದ ಗ್ರಾಮೀಣಮಟ್ಟದ ವಿವಿಧ ಕ್ರೀಡಾಕೂಟದ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ವಿಷ್ಣುಮೂರ್ತಿ ಭಟ್, ಅತಿಕಾರಿಬೆಟ್ಟು ಗ್ರಾಪಂ ಸದಸ್ಯೆ ಪದ್ಮಿನಿ ವಿಜಯ ಶೆಟ್ಟಿ, ಪಂಜಿನಡ್ಕ ಫ್ರೆಂಡ್ಸ್‌ನ ಕಿಶೋರ್ ಶೆಟ್ಟಿ ತೆಂಗಾಳಿ, ಶ್ರೀ ಆದಿ ಜನಾರ್ದನ ಸೇವಾ ಯುವಕ ಮಂಡಲದ ದೀಪಕ್ ಶಿಮಂತೂರು, ದೇವಸ್ಥಾನದ ಉಪ ಪ್ರಬಂಧಕಿ ರಕ್ಷಿತಾ ಮತ್ತಿತರರಿದ್ದರು. ಗೋಪಾಲ್ ಶಿಮಂತೂರು ನಿರೂಪಿಸಿದರು. ಬಳಿಕ ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net