ತಾನು ಕಪ್ಪು ಎಂದಿದ್ದಕ್ಕೆ ಶಿಲ್ಪಾ ಶೆಟ್ಟಿ ರಾತ್ರೋ ರಾತ್ರಿ ಆ ವ್ಯಕ್ತಿಗೆ ಮಾಡಿದ್ದೇನು?

sHILPA
Published on

ಮುಂಬೈ: ಬಾಲಿವುಡ್​ ನಟಿ ಶಿಲ್ಪಾ ಶೆಟ್ಟಿ ವಯಸ್ಸು 40 ದಾಟಿದೆ. ಈಗಲೂ 20ರ ಚೆಲುವೆಯರನ್ನೂ ಮೀರಿಸುವ ಮೈಮಾಟ ಅವರದ್ದು. ಆದರೆ, ಇದೇ ಶಿಲ್ಪಾ ಶೆಟ್ಟಿ ಚಿಕ್ಕಂದಿನಲ್ಲಿ ನೋಡಲು ಅಷ್ಟೇನೂ ಬೆಳ್ಳಗೆ ಇರಲಿಲ್ಲ. ಆಗ ಆ ಅಂದ ಚೆಂದ ಎಂಬ ಎಲ್ಲ ಕ್ರೆಡಿಟ್ಟು ಶಿಲ್ಪಾ ಬದಲಿಗೆ ತಂಗಿ ಶಮಿತಾಗೆ ಹೋಗುತ್ತಿತ್ತು. ಸ್ವತಃ ಅಪ್ಪ ಅಮ್ಮನೇ ಶಮಿತಾನೇ ಚೆಂದುಳ್ಳಿ ಚೆಲುವೆ ಎನ್ನುತ್ತಿದ್ದರು. ಆ ಸಂದರ್ಭದಲ್ಲಿ ಆ ಕೋಪ ತಾಪವನ್ನು ತಂಗಿ ಶಮಿತಾ ಮೇಲೆ ತೀರಿಸಿಕೊಳ್ಳುತ್ತಿದ್ದರು ಶಿಲ್ಪಾ. ರಾತ್ರಿ ಮಲಗಿದ್ದಾಗ ಬೆಡ್​ರೂಮ್​ಗೆ ತೆರಳಿ ಕೈ ಕೈ ಮಿಲಾಯಿಸಿ ಶಮಿತಾ ಜತೆ ಜಗಳ ಆಡುತ್ತಿದ್ದರಂತೆ ಶಿಲ್ಪಾ. ಇಂಥ ಕೆಲ ಬಾಲ್ಯದ ನೆನಪುಗಳನ್ನು ಈ ಸ್ಟಾರ್ ಸೋದರಿಯರು ನೆನಪುಮಾಡಿಕೊಂಡಿದ್ದಾರೆ.

"ಶಮಿತಾ ಮುದ್ದಾಗಿದ್ದಾಳೆ ಮತ್ತು ಅಂದಗಾತಿ. ನೀನು ಸ್ವಲ್ಪ ಡಾರ್ಕ್​ ಇದ್ದೀಯಾ ಎಂದು ಅಪ್ಪ ಆಗಾಗ ಹೇಳಿದಾಗ ನನಗೆ ಆಗ ಅಭದ್ರತೆ ಕಾಡುತ್ತಿತ್ತು. ಅಷ್ಟೇ ಅಲ್ಲ ಅಮ್ಮನ ಬಳಿ ಹೋಗಿ, 'ಯಾಕೆ ನನ್ನನ್ನು ಕಪ್ಪಾಗಿ ಹುಟ್ಟಿಸಿ, ಶಮಿತಾಳನ್ನು ಸುಂದರವಾಗಿ ಹುಟ್ಟಿಸಿದ್ದೀಯಾ? ಎಂದು ರಗಳೆ ತಗೆಯುತ್ತಿದ್ದೆ. ಎಲ್ಲರೂ ಮಲಗಿದ ಮೇಲೆ ಅವಳ ಕೋಣೆಗೆ ಹೋಗಿ ಅವಳೊಂದಿಗೆ ಜಗಳವಾಡಿ ಅಳಿಸಿ ಬರುತ್ತಿದ್ದೆ' ಎಂದು ಅಂದಿನ ನೆನಪುಗಳನ್ನು ಮೆಲಕು ಹಾಕಿದ್ದಾರೆ.

ಅಷ್ಟೇ ಅಲ್ಲ ಆಡಿಷನ್​ ಸಂದರ್ಭದಲ್ಲಿನ ಘಟನೆಯೊಂದನ್ನೂ ಶಿಲ್ಪಾ ಹೇಳಿಕೊಂಡಿದ್ದಾರೆ. "ಶಮಿತಾ ಒಳ್ಳೆ ನೃತ್ಯಗಾರ್ತಿ. ನಟನೆಯಲ್ಲೂ ಪರ್ಫೆಕ್ಟ್. ಯಾವತ್ತೂ ಸಿನಿಮಾ ಕ್ಷೇತ್ರಕ್ಕೆ ಪದಾರ್ಪಣೆ ಮಾಡಿದಳೋ, ಅಂದೇ ನಾನು ನಿರ್ಧರಿಸಿದೆ. ಇನ್ನು ಮುಂದೆ ನನಗೆ ಸಿನಿಮಾ ಸಿಗಲ್ಲ. ಯಾರೂ ಅವಕಾಶವನ್ನೂ ನೀಡಲ್ಲ ಎಂದು' ಹೇಳಿಕೊಳ್ಳುತ್ತಾರೆ ಶಿಲ್ಪಾ.

ಅಂದಹಾಗೆ, 2000ರಲ್ಲಿ ತೆರೆಕಂಡಿದ್ದ ಮೊಹಬ್ಬತ್ತೀನ್​ ಸಿನಿಮಾ ಮೂಲಕ ಬಾಲಿವುಡ್​ಗೆ ಪದಾರ್ಪಣೆ ಮಾಡಿದ್ದ ಶಮಿಕಾ, ಇಲ್ಲಿಯವರೆಗೂ 17 ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net