VIDEO | ಪತ್ನಿ ಮನ ಒಲಿಸಲು ಶಿಖರ್​ ಧವನ್​ ಡ್ಯಾನ್ಸ್​, ಕಾಲೆಳೆದ ಚಾಹಲ್​!

dhawan1
Published on

ನವದೆಹಲಿ: ಲಾಕ್​ಡೌನ್​ ಸಮಯದಲ್ಲಿನ ವಿವಿಧ ಚಟುವಟಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಸುದ್ದಿಯಾಗುತ್ತ ಬಂದಿರುವ ಟೀಮ್​ ಇಂಡಿಯಾದ ಎಡಗೈ ಬ್ಯಾಟ್ಸ್​ಮನ್​ ಶಿಖರ್​ ಧವನ್​ ಇದೀಗ ಪತ್ನಿ ಅಯೇಷಾ ಮನ ಒಲಿಸುವ ಸಲುವಾಗಿ ನೃತ್ಯ ಮಾಡಿದ್ದಾರೆ. ಅವರು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋಗೆ ಸಹ&ಆಟಗಾರ ಹಾಗೂ ಸ್ಪಿನ್ನರ್​ ಯಜುವೇಂದ್ರ ಚಾಹಲ್​ ಕಾಲೆಳೆದಿದ್ದಾರೆ.

ಜನಪ್ರಿಯ ಗಾಯಕ ಬಲ್ಲಿ ಸಗೂ ಅವರ ಆಜಾ ನಾಚ್ಲೆ ಹಾಡಿನ ಹಿನ್ನೆಲೆಯಲ್ಲಿ ನರ್ತಿಸಿರುವ ಧವನ್​ಗೆ ಪುತ್ರ ಜೊರಾವರ್​ ಕೂಡ ಸಾಥ್​ ನೀಡಿದ್ದಾರೆ. ಇದಕ್ಕೆ ಧವನ್​, ಪತ್ನಿಯ ಮನ ಒಲಿಸಲು ಪುತ್ರನ ಬೆಂಬಲ ಅಗತ್ಯ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಪ್ರತಿಯಾಗಿ ಚಾಹಲ್​, ಒಂದು ವೇಳೆ ಪತ್ನಿ ಸಿಟ್ಟಾದರೆ ಆಗ ಪುತ್ರ ಜೊರಾವರ್​ ಕೂಡ ಆಕೆಯ ಕಡೆ ವಾಲುತ್ತಾನೆ ಸಹೋದರ ಎಂದು ಕಮೆಂಟ್​ ಹಾಕಿ ತಮಾಷೆ ಮಾಡಿದ್ದಾರೆ.

ಶಿಖರ್​ ಧವನ್​ ಈ ಮುನ್ನ ಪುತ್ರ ಜೊರಾವರ್​ ಸೂಪರ್​ ಹೀರೋ ಉಡುಪು ಧರಿಸಿ ಚಪಾತಿ ಕಾಯಿಸುತ್ತಿರುವ ವಿಡಿಯೋ ಪ್ರಕಟಿಸಿ ಗಮನ ಸೆಳೆದಿದ್ದರು. ದೆಹಲಿಯಲ್ಲಿ ಸಮಾಜ ಸೇವೆಯಲ್ಲೂ ತೊಡಗಿಕೊಂಡಿರುವ ಧವನ್​, ಇತ್ತೀಚೆಗೆ ಪಾಕಿಸ್ತಾನದ ಹಿಂದು ನಿರಾಶ್ರಿತರ ಶಿಬಿರಕ್ಕೂ ಭೇಟಿ ನೀಡಿ ಅಗತ್ಯ ವಸ್ತುಗಳು ಮತ್ತು ಕ್ರಿಕೆಟ್​ ಕಿಟ್​ ವಿತರಿಸಿ ಅಭಿಮಾನಿಗಳ ಮನಗೆದ್ದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net