ಲೇವಾದೇವಿ ಕೇಸ್​ ಶೆಹಬಾಝ್ ಷರೀಫ್ ಮತ್ತೆ ಜೈಲಿಗೆ ​

Shehbaz-Sharif
Pic19-045 RAWALPINDI: Jun19-Opposition Leader Shehbaz Sharif reached to the residents of Former Member National Assembly and Leader of Muslim League (N) Hanif Abbasi. ONLINE PHOTO by Raja Asim
Published on

ಲಾಹೋರ್​: ಮನಿಲಾಂಡರಿಂಗ್​ ಕೇಸ್​ಗೆ ಸಂಬಂಧಿಸಿ ಪಾಕಿಸ್ತಾನದ ನ್ಯಾಷನಲ್ ಅಸೆಂಬ್ಲಿಯ ವಿಪಕ್ಷ ನಾಯಕ ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್​ (ಪಿಎಂಎಲ್​-ಎನ್​) ಮುಖ್ಯಸ್ಥ ಶೆಹಬಾಝ್​ ಷರೀಫ್ ಅವರನ್ನು ಮಂಗಳವಾರ ಸೆರೆಮನೆಗಟ್ಟಲಾಗಿದೆ. ಶೆಹಬಾಝ್ ಅವರನ್ನು ಲಾಹೋರಿನ ಕೋಟ್ ಲಾಖ್​ಪತ್​ ಜೈಲಿಗೆ ಸ್ಥಳಾಂತರಿಸಲಾಗಿದೆ.

ಮೂರು ಬಾರಿ ಪ್ರಧಾನಿಯಾಗಿದ್ದ ನವಾಜ್ ಷರೀಫ್ ಅವರ ಸಹೋದರ ಶೆಹಬಾಝ್ ಅವರನ್ನು 700 ಕೋಟಿ ರೂಪಾಯಿ ಮನಿಲಾಂಡರಿಂಗ್ ಕೇಸ್​ನಲ್ಲಿ ನ್ಯಾಷನಲ್ ಅಕೌಂಟೆಂಬಿಲಿಟಿ ಬ್ಯೂರೋ (ಎನ್​ಎಬಿ) ಸೆಪ್ಟೆಂಬರ್ 28ರಂದು ಬಂಧಿಸಿತ್ತು. ಶೆಹಬಾಝ್ (69) ಅವರು ಪಂಜಾಬ್ ಪ್ರಾಂತ್ಯದ ಮಾಜಿ ಮುಖ್ಯಮಂತ್ರಿಯೂ ಆಗಿದ್ದು, ಮಾರನೇ ದಿನ ಅವರನ್ನು ಕೋರ್ಟ್​ಗೆ ಹಾಜರುಪಡಿಸಲಾಗಿತ್ತು.

ಮಂಗಳವಾರ ಮತ್ತೆ ರಿಮಾಂಡ್​ ವಿಸ್ತರಿಸುವಂತೆ ಎನ್​ಎಬಿ ಸಲ್ಲಿಸಿದ್ದ ಕೋರಿಕೆಯನ್ನು ಕೋರ್ಟ್ ತಿರಸ್ಕರಿಸಿದ್ದು, ಆರೋಪಿ ಶೆಹಬಾಝ್ ಅವರನ್ನು ಜೈಲಿಗೆ ಕಳುಹಿಸಿದೆ. ಇದೇ ವೇಳೆ, ಕೋರ್ಟ್​ನಿಂದ ಹೊರಬಂದ ಬಳಿಕ ಶೆಹಬಾಝ್​, ಮನಿಲಾಂಡರಿಂಗ್ ಕೇಸ್ ಬಗ್ಗೆ ಏನೂ ವಿಚಾರಣೆ ನಡೆಯದಿರುವ ಬಗ್ಗೆ ಅಸಮಾಧಾನ ಹೊರಹಾಕಿದರು. ಬಂಧನದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಆರೋಪಿಸಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net