ಪ್ರೇಯಸಿಯನ್ನು ಕತ್ತರಿಸಿದ್ದಕ್ಕೆ ಯಾವುದೇ ಪಶ್ಚಾತ್ತಾಪವಿಲ್ಲವೆಂದ ಪ್ರಿಯಕರ

Mumbai Murder
Published on

ಮುಂಬೈ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ಧಾ ವಾಲ್ಕರ್​ ಹತ್ಯೆ ಪ್ರಕರಣ ಮಾಸುವ ಮುನ್ನವೇ ಅದೇ ರೀತಿಯ ಘಟನೆಯನ್ನು ಹೋಲುವ ಘಟನೆಯೊಂದು ಮಹಾನಗರಿ ಮುಂಬೈನಲ್ಲಿ ನಡೆದಿತ್ತು.

ತನ್ನ ಪ್ರೇಮಿಯನ್ನು ಕೊಂದು ದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಕುದಿಸಿದ ಆರೋಪದ ಮೇಲೆ ಪ್ರಿಯಕರ ಮನೋಜ್​ ಸಾನೆ(56) ಎಂಬುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ಧಾರೆ.

Mumbai Murder

ಪಶ್ಚಾತ್ತಾಪವಿಲ್ಲ

ವಿಚಾರಣೆ ವೇಳೆ ಆರೋಪಿಯೂ ತನ್ನ ಪ್ರೇಯಸಿ ಸರಸ್ವತಿ ವೈದ್ಯ(32) ಜೂನ್​ 3ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಳು. ವಿಚಾರ ಹೊರ ಬಂದರೆ, ಎಲ್ಲಿ ಪೊಲೀಸರು ತನ್ನನ್ನು ಪ್ರಕರಣದಲ್ಲಿ ಸಿಲುಕಿಸುತ್ತಾರೆ ಎಂದು ಭಯಭೀತಗೊಂಡು ಆಕೆಯ ದೇಹವನ್ನು ಮರ ಕಟ್​ ಮಾಡುವ ಮೆಷಿನ್​ನಿಂದ ತುಂಡು ತುಂಡಾಗಿ ಕತ್ತರಿಸಿದೆ.

ಬಳಿಕ ಆಕೆಯ ದೇಹ ಭಾಗಗಳನ್ನ ಮೊದಲಿಗೆ ಕುಕ್ಕರ್​ನಲ್ಲಿ ಕುದಿಸಿ ಮಾಂಸ ಹಾಗೂ ಮೂಳೆಯನ್ನು ಬೇರ್ಪಡಿಸಿದೆ. ಬಳಿಕ ಅದನ್ನು ಮಿಕ್ಸಿಯಲ್ಲಿ ರುಬ್ಬಿ ನಾಯಿಗಳಿಗೆ ಬಡಿಸಿದೆ. ಬಳಿಕ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದೆ. ಆದರೆ, ಈ ವಿಚಾರದಲ್ಲಿ ಯಾವುದೇ ಪಶ್ಚಾತ್ತಾಪವಿಲ್ಲ ಎಂದು ವಿಚಾರಣೆ ವೇಳೆ ಆರೋಪಿ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ಧಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net