

ಮುಂಬೈ: ಫಿಟ್ನೆಸ್ ಟ್ರೈನಿಂಗ್ಗೆ ಹೋಗುವವರು ಸ್ಪೋರ್ಟ್ಸ್ವೇರ್ ಡ್ರೆಸ್ ಬಟ್ಟೆ ಧರಿಸುವುದು ಸಾಮಾನ್ಯ. ಆದರೆ ಪುಣೆಯ ಈ ಡಾಕ್ಟರ್ ವಿಶೇಷ. ಭಾರತೀಯ ಮಹಿಳೆಯರ ಸಂಭ್ರಮವೇ ಸೀರೆ, ನಾನು ಅದನ್ನೇ ಉಟ್ಟು ಪುಷ್ಅಪ್ ಮಾಡುತ್ತೇನೆಂದು ವೈರಲ್ ಆಗಿದ್ದಾರೆ.
ಪುಣೆಯ ಡಾಕ್ಟರ್ ಶಾರ್ವರಿ ಇನಾಮ್ದಾರ್ ಆ ವಿಶೇಷ ವೈದ್ಯೆ. ಆಕೆ ಸೀರೆಯುಟ್ಟು ಜಿಮ್ನಲ್ಲಿ ಟ್ರೈನಿಂಗ್ ಪಡೆದಿದ್ದು, ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನೀಲಿ ಕಲರ್ ಸೀರೆಯಲ್ಲಿ ಪುಷ್ಅಪ್, ವೈಟ್ ಲಿಫ್ಟಿಂಗ್ ಮಾಡುವ ಪರಿಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಭಾರತೀಯ ಹೆಣ್ಣು ಮಕ್ಕಳು ಎಲ್ಲೆಡೆ ಸೀರೆ ಉಡುವುದಿಲ್ಲ. ಹಬ್ಬ, ಸಂಭ್ರಮಾಚರಣೆ ಎಂದರೆ ಸೀರೆ ಉಡುತ್ತಾರೆ. ಆದರೆ ನಾನು ಎಲ್ಲ ಹೆಣ್ಣು ಮಕ್ಕಳು ಎಲ್ಲ ಸಮಯದಲ್ಲೂ ಸಂಭ್ರಮಿಸಬೇಕು ಎಂದು ಬಯಸುತ್ತೇನೆ. ಪ್ರತಿ ಹೆಣ್ಣು ಮಗಳು ತನ್ನ ದೈನದಿಂದ ಕೆಲಸದೊಂದಿಗೆ ಫಿಟ್ನೆಸ್ ಅನ್ನೂ ಸೇರಿಸಿಕೊಳ್ಳಬೇಕು. ಅದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢವಾಗಬಹುದು ಎಂದು ಶಾರ್ವರಿ ಹೇಳಿದ್ದಾರೆ. (ಏಜೆನ್ಸೀಸ್)