ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಹಾಗೂ ನಟ ಶರ್ವಾನಂದ್ ನಟಿಸಿರುವ ಫ್ಯಾಮಿಲಿ ಎಂಟರ್‌ಟೈನರ್ ಚಿತ್ರವಾದ 'ಆಡವಾಳ್ಳು ಮೀಕು ಜೋಹಾರ್ಲು' ಇಂದು ತೆರೆಗಪ್ಪಳಿಸಿದ್ದು, ಉತ್ತಮ ಪ್ರತಿಕ್ರಿಯೆ ಎನ್ನುವುದಕ್ಕಿಂತ ಟ್ವಿಟರ್ನಲ್ಲಿ ಭೇಷ್ ಎನಿಸಿಕೊಂಡಿದೆ. ಹೌದು, ಈ ಚಿತ್ರ ವೀಕ್ಷಿಸಲು ತೆಲುಗಿನ ಎರಡು ರಾಜ್ಯಗಳಲ್ಲಿ ಸಾವಿರಾರು ಸಿನಿಪ್ರೇಕ್ಷಕರು ಥಿಯೇಟರ್‌ಗಳ ಬಳಿ ಜಮಾಯಿಸಿದ್ದು, ಸಿನಿಮಾ ನೋಡಿದ ನಂತರ ತುಂಬಾ ನೆಟ್ಟಿಗರು ತಮ್ಮ ಅನಿಸಿಕೆಗಳನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.