

ನವದೆಹಲಿ: 2019ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯ ಯಾರಿಗೆ ತಾನೆ ನೆನಪಿಲ್ಲ ಹೇಳಿ. ವಿಶ್ವ ಕ್ರಿಕೆಟ್ ಲೋಕವನ್ನೇ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದ ಪಂದ್ಯ. ಸೂಪರ್ ಓವರ್ ಕೂಡ ಟೈಗೊಂಡರೂ ಹೆಚ್ಚು ಬೌಂಡರಿ ಸಿಡಿಸಿದ ಆಧಾರದ ಮೇಲೆ ಆತಿಥೇಯ ಇಂಗ್ಲೆಂಡ್ ಚಾಂಪಿಯನ್ ಆಯಿತು. ಒಂದು ವರ್ಷ ಕಳೆದರೂ ನ್ಯೂಜಿಲೆಂಡ್ ಆಟಗಾರರು ಆ ಪಂದ್ಯದ ಗುಂಗಿನಿಂದ ಇನ್ನೂ ಹೊರ ಬಂದಂತೆ ಕಾಣುತ್ತಿಲ್ಲ. ಇದೀಗ ಹಿರಿಯ ಬ್ಯಾಟ್ಸ್ಮನ್ ರಾಸ್ ಟೇಲರ್, ಏಕದಿನ ಕ್ರಿಕೆಟ್ನಲ್ಲಿ ಪಂದ್ಯ ಟೈ ಆದರೆ ಸೂಪರ್ ಬದಲಿಗೆ ಟ್ರೋಫಿ ಹಂಚಿದರೆ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ವೇಗಿ ಭುವನೇಶ್ವರ್ ಕುಮಾರ್ಗೆ ಮಾದರಿ ಯಾರು ಗೊತ್ತ….
2019ರ ವಿಶ್ವಕಪ್ ಫೈನಲ್ನ ಸೂಪರ್ ಓವರ್ ಕೂಡ ಟೈಗೊಂಡ ಬಳಿಕ ಟ್ರೋಫಿ ಇಂಗ್ಲೆಂಡ್ ಪಾಲಾದ ಬಳಿಕ ಐಸಿಸಿ ಸಾಕಷ್ಟು ಟೀಕೆಗೆ ಗುರಿಯಾಗಿತ್ತು. ‘ನನಗೆ ಈಗಲೂ ಅರ್ಥ ಆಗುತ್ತಿಲ್ಲ. ಏಕದಿನ ಕ್ರಿಕೆಟ್ಗೆ ಸೂಪರ್ ಓವರ್ ಅವಶ್ಯಕತೆ ಇದೆಯೇ ಎಂದು. ಒಂದು ವೇಳೆ ಫೈನಲ್ ಪಂದ್ಯ ಟೈ ಆದರೆ, ಇದರ ಬದಲಾಗಿ ಜಂಟಿ ವಿಜೇತರು ಎಂದು ಘೋಷಿಸುವುದು ಒಳಿತು’ ಎಂದು ಟೇಲರ್ ಹೇಳಿದ್ದಾರೆ. ಇದೇ ಎರಡು ತಂಡಗಳಿಗೂ ನೀಡಲಾಗುವ ಸಮಾನಾದ ಗೌರವ ಎಂದಿದ್ದಾರೆ. ವಿಶ್ವಕಪ್ ಫೈನಲ್ನಲ್ಲಿ ಸೋತ ಬಳಿಕ ಅಂಪೈರ್ ಬಳಿ ತೆರಳಿ, ಇದೊಂದು ಉತ್ತಮ ಪಂದ್ಯ, ಸೂಪರ್ ಓವರ್ ಇದುವುದು ನನಗೆ ಗೊತ್ತಿರಲಿಲ್ಲ. ಟೈ ಅಂದ್ರೆ ಟೈ, ಮೈದಾನದಲ್ಲೇ ವಾದಿಸಬೇಕು ಎಂದಿಕೊಂಡಿದ್ದೇವು. ಎರಡು ಇನಿಂಗ್ಸ್ಗಳಿಂದ 100 ಓವರ್ ಪೂರೈಸಿ ಲಿತಾಂಶ ಬರದಿದ್ದರೆ, ಆ ಪಂದ್ಯ ಟೈ ಅಂತಾನೇ ಅರ್ಥ ಎಂದು ಟೇಲರ್ ಹೇಳಿದ್ದಾರೆ.
ನ್ಯೂಜಿಲೆಂಡ್ ತಂಡ ಸೂಪರ್ ಓವರ್ ಪಂದ್ಯಗಳಲ್ಲಿ ಇದುವರೆಗೂ ಹಿನ್ನಡೆಯನ್ನೇ ಅನುಭವಿಸಿದೆ. ಇದುವರೆಗೂ 8 ಬಾರಿ ಸೂಪರ್ ಓವರ್ ಎದುರಿಸಿದ್ದು, 7ರಲ್ಲಿ ಸೋಲನುಭವಿಸಿದೆ. 2019ರ ಜುಲೈ 14 ರಂದು ನಡೆದ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನ್ಯೂಜಿಲೆಂಡ್ 8 ವಿಕೆಟ್ಗೆ 241 ರನ್ ಗಳಿಸಿದರೆ, ಇಂಗ್ಲೆಂಡ್ 50 ಓವರ್ಗಳಲ್ಲಿ 241 ರನ್ಗಳಿಗೆ ಸರ್ವಪತನ ಕಂಡಿತು. ಬಳಿಕ ನಡೆದ ಸೂಪರ್ ಓವರ್ನಲ್ಲಿ ಇಂಗ್ಲೆಂಡ್ ವಿಕೆಟ್ ನಷ್ಟವಿಲ್ಲದೆ 15 ರನ್ಗಳಿಸಿದರೆ, ನ್ಯೂಜಿಲೆಂಡ್ 1 ವಿಕೆಟ್ 15 ರನ್ ಗಳಿಸಿತು. ಪಂದ್ಯದಲ್ಲಿ ಹೆಚ್ಚು ಬೌಂಡರಿ ಸಿಡಿಸಿದ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡವನ್ನು ವಿಜಯಿ ಎಂದು ಘೋಷಿಸಲಾಯಿತು.