More

    ‘ಶುಗರ್​ಲೆಸ್‌’ ಚಿತ್ರದ ಪಾತ್ರಗಳನ್ನು ಪರಿಚಯಿಸಲಿರುವ ಶರಣ್ …

    ಬೆಂಗಳೂರು: ‘ಡಾಟರ್ ಆಫ್ ಪಾರ್ವತಮ್ಮ’ ನಿರ್ಮಾಪಕ ಶಶಿಧರ ಕೆ.ಎಂ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರ ‘ಶುಗರ್​ಲೆಸ್‌’ ಚಿತ್ರದ ಟೈಟಲ್​ ಹಾಡು ಇಂದು ಸಂಜೆ 5.01ಕ್ಕೆ ಯೂಟ್ಯೂಬ್​ನ ಆನಂದ್​ ಆಡಿಯೋ ಚಾನಲ್​ನಲ್ಲಿ ಬಿಡುಗಡೆಯಾಗಿದೆ. ಇಂದು ನಾಯಕ ಪೃಥ್ವಿ ಅಂಬರ್​ ಅವರ ಹುಟ್ಟುಹಬ್ಬವಾಗಿದ್ದು, ಬರ್ಥ್​​ಡೇ ಗಿಫ್ಟ್​ ಆಗಿ ಈ ಹಾಡು ಬಿಡುಗಡೆಯಾಗಿದೆ. ನವೀನ್​ ಸಜ್ಜು ಬರೆದಿರುವ ಈ ಹಾಡಿಗೆ ವಿ. ನಾಗೇಂದ್ರ ಪ್ರಸಾದ್​ ಸಾಹಿತ್ಯ ಬರೆದಿದ್ದಾರೆ.

    ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ‘ಶಾರ್ದೂಲ’ ಬಿಡುಗಡೆ …

    ಚಿತ್ರದ ಇನ್ನೊಂದು ವಿಶೇಷವೆಂದರೆ, ಶರಣ್​ ಈ ಚಿತ್ರಕ್ಕೆ ಇತ್ತೀಚೆಗೆ ತಮ್ಮ ಧ್ವನಿ ನೀಡಿದ್ದಾರೆ. ಈ ಮೂಲಕ ಅವರು ಚಿತ್ರ ಹಾಗೂ ಅದರಲ್ಲಿನ ಪ್ರಮುಖ ಪಾತ್ರಗಳನ್ನು ಪರಿಚಯಿಸಲಿದ್ದಾರೆ. ಈಗಾಗಲೇ ಶರಣ್​ ಚಿತ್ರಕ್ಕೆ ಕಾಮೆಂಟರಿ ಕೊಟ್ಟಿದ್ದು, ಸದ್ಯದಲ್ಲೇ ಬಿಡುಗಡೆಯಾಗಲಿರುವ ಟ್ರೇಲರ್​ನಲ್ಲೂ ಅವರ ಧ್ವನಿಯನ್ನು ಕೇಳಬಹುದಾಗಿದೆ.

    ಬಿಡುಗಡೆಗೆ ಸಿದ್ದವಾಗಿರಯವ ‘ಶುಗರ್​ಲೆಸ್‌’ ಚಿತ್ರದ ಕಥೆ, ಚಿತ್ರಕಥೆಯನ್ನು ಶಶಿಧರ್​ ಅವರೇ ಹೊತ್ತಿದ್ದು, ಚಿತ್ರವನ್ನು ಶಶಿಧರ್ ಸ್ಟುಡಿಯೋಸ್ ಪ್ರೊಡಕ್ಷನ್ಸ್ ಮೂಲಕ ನಿರ್ಮಿಸುತ್ತಿದ್ದಾರೆ. ಚಿತ್ರದ ಸಹ ನಿರ್ಮಾಪಕರಾಗಿ ಪ್ರಜ್ವಲ್ ಎಂ.ರಾಜ ಹಾಗೂ ವಿಜಯಲಕ್ಷ್ಮಿ ಕೃಷ್ಣೇಗೌಡ ಸಾತ್ ನೀಡಿದ್ದಾರೆ.

    ಇದನ್ನೂ ಓದಿ: ಸದ್ಯದಲ್ಲೇ ಸೆನ್ಸಾರ್​ ಅಂಗಳಕ್ಕೆ ದಿಗಂತ್​ ಅಭಿನಯದ ‘ಮಾರಿಗೋಲ್ಡ್​’ …

    ‘ಶುಗರ್​ಲೆಸ್‌’ ಚಿತ್ರದಲ್ಲಿ ಪೃಥ್ವಿ ಅಂಬರ್​ಗೆ ನಾಯಕಿಯಾಗಿ ‘ಬಿಗ್​ ಬಾಸ್​’ ಖ್ಯಾತಿಯ ಪ್ರಿಯಾಂಕಾ ತಿಮ್ಮೇಶ್​ ನಟಿಸಿದ್ದು, ಉಳಿದಂತೆ ಹಿರಿಯ ನಿರ್ದೇಶಕ ಎಸ್.ನಾರಾಯಣ್, ದತ್ತಣ್ಣ, ಪದ್ಮಜಾ ರಾವ್, ರಘು ರಾಮನಕೊಪ್ಪ, ಧರ್ಮಣ್ಣ ಕಡೂರ್, ನವೀನ್ ಡಿ ಪಡೀಲ್, ಹೊನ್ನವಳ್ಳಿ ಕೃಷ್ಣ ಮುಂತಾದವರು ಅಭಿನಯಿಸಿದ್ದಾರೆ. ಅನೂಪ್​ ಸೀಳಿನ್​ ಸಂಗೀತ ಮತ್ತು ಲವಿತ್​ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

    ಒಂದು ವರ್ಷದ ಆ ಮಗುವನ್ನು ಒಂದು ದಿನ ಭೇಟಿ ಮಾಡುವೆ ಅಂದ್ರು ನಟಿ ರಶ್ಮಿಕಾ; ಅದಕ್ಕೆ ಕಾರಣ ಕೂಡ ‘ರಶ್ಮಿಕಾ’ನೇ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts