ಸಂಪೂರ್ಣ ನವಗ್ರಹ ಸಹಿತ ಶನಿಯಾಗ ಸಂಪನ್ನ

shaniyaga
ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಸಮಸ್ತ ಲೋಕ ಕಲ್ಯಾಣಾರ್ಥ ಸಾಮೂಹಿಕ ಸಂಪೂರ್ಣ ನವಗ್ರಹ ಸಹಿತ ಶನಿಯಾಗ ಶನಿವಾರ ಸಂಪನ್ನಗೊಂಡಿತು.
Published on

ಆರ್ಡಿ: ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಿತ್ತೇರಿ ಆಶ್ರಯದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಬೆಳ್ವೆ ವಲಯ ಹಾಗೂ ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಹೆಬ್ರಿ ತಾಲೂಕು ಬೆಳ್ವೆ ವಲಯ ಸಹಕಾರದೊಂದಿಗೆ ಸಮಸ್ತ ಲೋಕಕಲ್ಯಾಣಾರ್ಥ ಸಾಮೂಹಿಕ ಸಂಪೂರ್ಣ ನವಗ್ರಹ ಸಹಿತ ಶನಿಯಾಗ ಶನಿವಾರ ಸಂಪನ್ನಗೊಂಡಿತು.

ಬೆಳಗ್ಗೆ ದೇವತಾ ಪ್ರಾರ್ಥನೆ, ಕಲ್ಪೋಕ್ತ ಪೂಜೆ, ಸಂಪೂರ್ಣ ನವಗ್ರಹ ಸಹಿತ ಶನಿಯಾಗ, ಮಧ್ಯಾಹ್ನ ಮಹಾಮಂಗಳಾರತಿ, ಅನ್ನಸಂತರ್ಪಣೆ ನೆರವೇರಿತು. ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ದೇವಳ ಸಿಬ್ಬಂದಿ ಮತ್ತು ಅರ್ಚಕ ಗೋಪಾಲಕೃಷ್ಣ ಶಾಸ್ತ್ರಿ, ಅರ್ಚಕ ವೃಂದ, ಆರ್ಡಿ ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಸುರೇಶ ಶೆಟ್ಟಿ ಆರ್ಡಿ, ಕಾರ್ಯದರ್ಶಿ ಪ್ರಹ್ಲಾದ್ ಶೆಟ್ಟಿ ಆರ್ಡಿ, ಪದಾಧಿಕಾರಿಗಳು, ಸದಸ್ಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಬೆಳ್ವೆ ವಲಯ ಮೇಲ್ವಿಚಾರಕ ರಾಘವೇಂದ್ರ ಗೌಡ, ಹೆಬ್ರಿ ತಾಲೂಕು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಅಧ್ಯಕ್ಷ ಗೋಪಾಲ ಕುಲಾಲ, ಬೆಳ್ವೆ ವಲಯ ಪ್ರಗತಿಬಂಧು ಸ್ವಸಹಾಯ ಸಂಘಗಳ ವಲಯಾಧ್ಯಕ್ಷ ಕೃಷ್ಣ ಕಾಂಚನ್ ಆರ್ಡಿ, ವಿವಿಧ ಭಜನಾ ಮಂಡಳಿ, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net