

ಅಮೆರಿಕಾ: ನಿನ್ನೆ (ಜೂ.13) ಅರ್ನೋಸ್ ವಾಲೆ ಸ್ಟೇಡಿಯಂನಲ್ಲಿ ನಡೆದ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ 25 ರನ್ಗಳಿಂದ ಬಾಂಗ್ಲಾದೇಶ ಭರ್ಜರಿ ಜಯ ಗಳಿಸಿತು. ಇನ್ನು ಈ ಪಂದ್ಯದಲ್ಲಿ 46 ಎಸೆತಗಳನ್ನು ಎದುರಿಸಿದ ಶಕೀಬ್ ಅಲ್ ಹಸನ್, ಅಜೇಯ 64 ರನ್ ಸಿಡಿಸಿ, ನೆದರ್ಲ್ಯಾಂಡ್ಸ್ ವಿರುದ್ಧದ ಗೆಲುವಿಗೆ ಪ್ರಮುಖ ಕಾರಣರಾದರು. ಅತ್ಯುತ್ತಮ ಬ್ಯಾಟಿಂಗ್ ಕೊಡುಗೆ ನೀಡಿದ್ದಕ್ಕೆ ತಂಡದ ಆಟಗಾರನಾಗಿ ಶಕೀಬ್ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು.
ಕಳೆದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದ ಶಕೀಬ್ರನ್ನು ಬಾಂಗ್ಲಾ ಕ್ರಿಕೆಟ್ ಮಂಡಳಿ ಅಂದೇ ಕೈಬಿಡಬೇಕಿತ್ತು. ಅವರನ್ನು ಆಡಿಸುವ ಅವಶ್ಯಕತೆ ಇರಲಿಲ್ಲ. ನನ್ನ ಪ್ರಕಾರ, ಶಕೀಬ್ ಅಲ್ ಹಸನ್ ಕ್ರಿಕೆಟ್ನಿಂದ ನಿವೃತ್ತಿ ಪಡೆಯುವುದೇ ಉತ್ತಮ ಎಂದು ಲೇವಡಿ ಮಾಡಿದ್ದರು. ಇನ್ನು ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಶಕೀಬ್, ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರ ಈ ಹೇಳಿಕೆಗೆ ತಮ್ಮ ಶೈಲಿಯಲ್ಲೇ ಉತ್ತರಿಸಿದ್ದು ಮಾತ್ರ ಸದ್ಯ ಕ್ರಿಕೆಟ್ ಅಭಿಮಾನಿಗಳ ಹುಬ್ಬೇರಿಸಿದೆ.
ಇನ್ನು ವೀರು ಹೇಳಿಕೆಗೆ ಸಿಟ್ಟಾಗಿದ್ದ ಹಸನ್, ತನ್ನ ಸಮಯಕ್ಕಾಗಿ ಕಾದು ಕುಳಿತಿದ್ದರು ಎಂಬುದು ಪಂದ್ಯ ಮುಗಿದ ಬಳಿಕ ಮಾತನಾಡಿದ ಶೈಲಿಯಿಂದಲೇ ತಿಳಿದುಬಂದಿದೆ. "ಆಟಗಾರರು ಇತರರ ಪ್ರಶ್ನೆಗಳಿಗೆ ಉತ್ತರಿಸಲು ಆಡುತ್ತಿಲ್ಲ. ತಮ್ಮ ತಂಡಕ್ಕೆ ಹೆಚ್ಚಿನ ಕೊಡುಗೆ ನೀಡುವ ಜವಾಬ್ದಾರಿಯಿಂದ ಅಷ್ಟೇ. ಅದು ಒಬ್ಬ ಬ್ಯಾಟ್ಸ್ಮನ್, ಬೌಲರ್ ಅಥವಾ ಫೀಲ್ಡರ್ ಆಗಿಯೂ ಇರಬಹುದು. ಕೊಡುಗೆ ನೀಡುವಲ್ಲಿ ವಿಫಲರಾದರೆ, ತಮ್ಮ ಫಾರ್ಮ್ ಬಗ್ಗೆ ಇಂತಹ ಟೀಕೆಗಳು ಕೇಳಿಬರುವುದು ಸಾಮಾನ್ಯ" ಎಂದು ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ,(ಏಜೆನ್ಸೀಸ್).