ಶಾರೂಖ್ ಖಾನ್ ಎಷ್ಟು ಬಾರಿ ಮದುವೆಯಾಗಿದ್ದಾರೆ ಗೊತ್ತಾ?

Shahrukh Khan Final
Published on

ಬಾಲಿವುಡ್‌ನ ಕ್ಯೂಟ್ ಜೋಡಿಗಳ ಪೈಕಿ ಶಾರೂಖ್ ಖಾನ್ ಮತ್ತು ಗೌರಿ ಖಾನ್ ಜೋಡಿ ಸಹ ಒಂದು. ಶಾರೂಖ್ ಮತ್ತು ಗೌರಿ ಮದುವೆ ಆಗಿ 29 ವರ್ಷಗಳೇ ಆಗಿದ್ದು, ಮಾದರಿ ಜೋಡಿ ಎಂದನಿಸಿಕೊಂಡಿದ್ದಾರೆ. ಅವರಿಬ್ಬರು ಪ್ರೀತಿಸಿ ಮದುವೆಯಾಗಿದ್ದಾರೆ ಎಂಬುದನೇ ಎಲ್ಲರಿಗೂ ಗೊತ್ತಿದೆ. ಆದರೆ, ಎಷ್ಟು ಬಾರಿ ಮದುವೆಯಾಗಿದ್ದಾರೆ ಅನ್ನೋದು ಗೊತ್ತಾ?

ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಶಾರೂಖ್ ಮತ್ತು ಗೌರಿ, ಮೂರು ಬಾರಿ ಮದುವೆಯಾಗಿದ್ದಾರಂತೆ. ಆಶ್ಚರ್ಯವಾಗಬಹುದು. ಆದರೂ ಇದು ನಿಜ. ಪರಸ್ಪರ ಬಹಳ ಪ್ರೀತಿಸುತ್ತಿದ್ದ ಶಾರೂಖ್ ಮತ್ತು ಗೌರಿ ಮೊದಲಿಗೆ ಕೋರ್ಟ್‌ನಲ್ಲಿ ರಿಜಿಸ್ಟರ್ ಮದುವೆಯಾದರಂತೆ. ಆ ನಂತರ 1991ರ ಆಗಸ್ಟ್ 26ಕ್ಕೆ ನಿಖಾಹ್ ಮಾಡಿಕೊಂಡಿದ್ದಾರೆ. ಅದಾಗಿ ಎರಡು ತಿಂಗಳಿಗೆ, ಹಿಂದೂ ಶೈಲಿಯಲ್ಲಿ ಮದುವೆಯಾಗಿದ್ದಾರೆ.

ಹೀಗೆ ಮೂರು ಮದುವೆಗಳನ್ನು ಮಾಡಿಕೊಂಡಿರುವ ಶಾರೂಖ್ ಖಾನ್ ಮತ್ತು ಗೌರಿ, ಮುಂದಿನ ವರ್ಷಕ್ಕೆ 30ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ಳಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net