

ನವದೆಹಲಿ: ವಿಶ್ವದ ಮಿಲಿಯನ್ ಡಾಲರ್ ಟೂರ್ನಿಗಳಲ್ಲಿ ಒಂದಾದ ಐಪಿಎಲ್ ಮುಕ್ತಾಯಗೊಂಡಿದ್ದು, ಬಾಲಿವುಡ್ ನಟ ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ ನೈಟ್ರೈಡರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಸುಮಾರು ಒಂದೂವರೆ ತಿಂಗಳಿಗೂ ಹೆಚ್ಚಿನ ಕಾಲ ಜನರನ್ನು ರಂಜಿಸಿದ್ದ ಐಪಿಎಲ್ಗೆ ವಿದ್ಯುಕ್ತ್ ತೆರೆ ಬಿದ್ದಿದ್ದು, ಇದೀಗ ಎಲ್ಲರ ಗಮನ ಟಿ20 ವಿಶ್ವಕಪ್ನತ್ತ ನೆಟ್ಟಿದೆ.
ಜೂನ್ 01ರಿಂದ ಆರಂಭವಾಗಲಿರುವ ಈ ಟೂರ್ನಿಯಲ್ಲಿ ಭಾಗವಹಿಸಲು ಬಹುತೇಕ ಎಲ್ಲಾ ತಂಡಗಳು ಅಮೆರಿಕಾ ತಲುಪಿದ್ದು, ಎಲ್ಲಾ ಆಟಗಾರರು ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಲೀಗ್ ಹಂತದ ಮ್ಯಾಚ್ಗೂ ಮೊದಲು ಮೊದಲು ಅಭ್ಯಾಸ ಪಂದ್ಯಗಳನ್ನು ಆಡುವ ಮೂಲಕ ಮೆಗಾ ಟೂರ್ನಿಗೆ ರೆಡಿಯಾಗುತ್ತಿದ್ದಾರೆ. ಇನ್ನೂ ಜೂನ್ 09ರಂದು ನಡೆಯಲಿರುವ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರೀಡಾಭಿಮಾನಿಗಳು ಎದುರು ನೋಡುತ್ತಿದ್ದು, ಉಭಯ ದೇಶಗಳ ನಡುವಿನ ಕಾದಾಟವನ್ನು ಕಣ್ತುಂಬಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ.
ಇನ್ನೂ ಭಾರತ ಹಾಗೂ ಪಾಕಿಸ್ತಾನ ಭಾಗಿಯಾಗುವ ಐಸಿಸಿ ಟೂರ್ನಿ ಶುರುವಾಗುವುದಕ್ಕೂ ಮುನ್ನ ಪಾಕ್ನ ಹಾಲಿ ಅಥವಾ ಮಾಜಿ ಕ್ರಿಕೆಟಿಗರು ಇಲ್ಲಸಲ್ಲದ ಹೇಳಿಕೆಗಳನ್ನು ಕೊಟ್ಟು ತೀವ್ರ ಟೀಕೆಗೆ ಗುರಿಯಾಗುತ್ತಾರೆ. ಇದೀಗ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದು, ಯಾವ ಆಧಾರದ ಮೇಲೆ ಈ ಹೇಳಿಕೆ ನೀಡಿದ್ದೀರಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ಐಸಿಸಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ಮಾತನಾಡಿರುವ ಅಫ್ರಿದಿ, ನನ್ನ ಪ್ರಕಾರ ವಿಶ್ವದ ಯಾವುದೇ ಕ್ರಿಕೆಟ್ ತಂಡದಲ್ಲಿ ಇಂತಹ ಬಲಿಷ್ಠ ಬೌಲಿಂಗ್ ಲೈನ್ಅಪ್ಅನ್ನು ಹೊಂದಿಲ್ಲ. ನಮ್ಮ ವೇಗದ ಬೌರ್ಗಳು ಸಾಕಷ್ಟು ಕೌಶಲ್ಯವನ್ನು ಹೊಂದಿದ್ದು, ಬೆಂಚ್ನಲ್ಲಿ ಕುಳಿತಿರುವವರು ಸಹ ಎದುರಾಳಿ ತಂಡದ ವಿರುದ್ಧ ಕಣಕ್ಕಿಳಿದಾಗ ಅಸಾಧಾರಣ ಪ್ರದರ್ಶನವನ್ನು ನೀಡುತ್ತಾರೆ ಎಂದು ಪಾಕ್ ಕ್ರಿಕೆಟ್ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇತ್ತ ಅಫ್ರಿದಿ ಹೇಳಿಕೆಗೆ ಕಿಡಿಕಾರಿರುವ ನೆಟ್ಟಿಗರು ಯಾರ ಬೌಲಿಂಗ್ ಲೈನ್ಅಪ್ ಹೇಗಿದೆ ಎಂಬುದು ನಿಮ್ಮ ಹೇಳಿಕೆಯಿಂದಲ್ಲ ಪ್ರದರ್ಶನದಿಂದ ಸಾಬೀತಾಗುತ್ತದೆ. ಕೆಲವರು ಟೀಮ್ ಇಂಡಿಯಾವನ್ನು ಟಾರ್ಗೆಟ್ ಮಾಡಿ ಅಫ್ರಿದಿ ಈ ಹೇಳಿಕೆ ನೀಡಿದ್ದಾರೆ ಎಂದು ಕಿಡಿಕಾರಿದ್ದಾರೆ. ನಿಮ್ಮ ಬೌಲಿಂಗ್ ಲೈನ್ ಅಪ್ ಬಲಿಷ್ಠವಾಗಿದಿದ್ದರೆ ಏಕದಿನ ವಿಶ್ವಕಪ್ನಲ್ಲಿ ಯಾಕೆ ಲೀಗ್ ಹಂತದಲ್ಲೇ ನಿರ್ಗಮಿಸಿದ್ರಿ ಎಂದು ಹಲವರು ಕಮೆಂಟ್ಗಳ ಮೂಲಕ ಕಿಡಿಕಾರಿದ್ದಾರೆ.