

ಮಧ್ಯಪ್ರದೇಶದ: ಸಾಮಾನ್ಯವಾಗಿ ಜೇನುನೊಣಗಳು ಮರದ ಮೇಲೆ ಅಥವಾ ಇತರ ಯಾವುದೇ ಹೊರಾಂಗಣ ಸ್ಥಳದಲ್ಲಿ ಗೂಡು ಮಾಡಿಕೊಂಡು ಇರುತ್ತವೆ. ಜೇನುನೊಣಗಳ ಹೆಸರು ಕೇಳಿದೊಡನೆ ಜನರು ಭಯದಿಂದ ಓಡಿಹೋಗುತ್ತಾರೆ ಮತ್ತು ಅದರ ಬಳಿ ಹೋಗಲು ಇಷ್ಟಪಡುವುದಿಲ್ಲ. ಆದರೆ ಮಧ್ಯಪ್ರದೇಶದ ಶಹದೋಲ್ನ ಮನೆಯೊಂದರಲ್ಲಿ ಸಾವಿರಾರು ಜೇನು ಹುಳಗಳು ಬೀಡು ಬಿಟ್ಟಿವೆ.
ಶಹದೋಲ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಕಳೆದ 15 ವರ್ಷಗಳಿಂದ ಒಂದಲ್ಲ ಎರಡಲ್ಲ ಆರು ಜೇನು ಗೂಡುಗಳ ಲಕ್ಷಗಟ್ಟಲೆ ಈ ಜೇನುನೊಣಗಳು ಮನೆ ಮಾಡಿಕೊಂಡು ಮನೆಯ ವಿವಿಧ ಭಾಗಗಳಲ್ಲಿ ಬೀಡು ಬಿಟ್ಟಿವೆ. ಈ ಜೇನುನೊಣಗಳು ಇಲ್ಲಿಯವರೆಗೆ ಯಾರಿಗೂ ಯಾವುದೇ ಹಾನಿ ಮಾಡಿಲ್ಲ. ಈ ಜೇನುನೊಣಗಳೊಂದಿಗೆ ಮನೆಯ ಜನರೂ ಬಹಳ ಸುಲಭವಾಗಿ ಬದುಕುತ್ತಿದ್ದಾರೆ.
15 ವರ್ಷಗಳಲ್ಲಿ ಯಾರಿಗೂ ತೊಂದರೆಯಾಗಿಲ್ಲ : ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯ ಸೊಹಗ್ಪುರ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಖನ್ನಾಧ್ ಗ್ರಾಮದಲ್ಲಿ ಈ ಮೆನೆ ಇದೆ. ವಿಶೇಷವೆಂದರೆ ಈ 15 ವರ್ಷಗಳಲ್ಲಿ ಮನೆಯಲ್ಲಿ ಮದುವೆ ಇತ್ಯಾದಿ ದೊಡ್ಡ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿತ್ತು. ಈ ಸಮಯದಲ್ಲಿ ಮನೆಯಲ್ಲಿ ಅತಿಥಿಗಳ ಗುಂಪು ಇರುತ್ತದೆ. ಆದರೆ ಇಲ್ಲಿಯವರೆಗೆ ಯಾರಿಗೂ ಹಾನಿ ಮಾಡಿಲ್ಲ. ಈ ಕುಟುಂಬದಲ್ಲಿ ಮುದುಕರು, ಯುವತಿಯರು, ಪುರುಷರು ಮತ್ತು ಮಕ್ಕಳು ಸಹ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ವಿಶ್ವದಾಖಲೆಗಾಗಿ 7 ದಿನಗಳ ಕಾಲ ಎಡೆಬಿಡದೆ ಕಣ್ಣೀರಿಟ್ಟ
ಪ್ರಾಣಿಶಾಸ್ತ್ರದ ನಿವೃತ್ತ ಪ್ರಾಧ್ಯಾಪಕ ವಿನಯ್ ಸಿಂಗ್ ಮಾತನಾಡಿ, ಮರಗಳು, ಗಿಡಗಳು, ಕಾಡುಗಳು ಮತ್ತು ಪರಿಸರವು ಅನುಕೂಲಕರವಾಗಿ ಉಳಿಯುವ ಸ್ಥಳದಲ್ಲಿ ಜೇನು ಹುಳಗಳು ಜೇನುಗೂಡುಗಳನ್ನು ನಿರ್ಮಿಸುವ ಮೂಲಕ ವಾಸಿಸಲು ಪ್ರಾರಂಭಿಸುತ್ತವೆ. ಈ ಮನೆಯಲ್ಲಿ ಅವುಗಳು ವಾಸಿಸುವ ಪರಿಸರಕ್ಕೆ ಅನುಕೂಲವಾಗಿರುವುದರಿಂದ ಜೇನುಗೂಡುಗಳು ಇಷ್ಟು ದಿನ ಇವೆ ಎನ್ನುತ್ತಾರೆ ಪರಿಸರವಾದಿಗಳು.