More

    ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು

    ನವದೆಹಲಿ: ವಿದೇಶದಿಂದ ಭಾರತಕ್ಕೆ ಬರುವವರಿಗೆ ಗಿಫ್ಟ್ ಬೇಕು ಎಂದು ನಮಗೆ ಇಷ್ಟವಾದದ್ದನ್ನು ಹೇಳುತ್ತೇವೆ.. ಆದರೆ ತಾಯಿಯೊಬ್ಬರು ಮಗಳಿಗೆ ಅಲ್ಲಿಂದ 10 ಕೆಜಿ ಟೊಮ್ಯಾಟೋ ಉಡುಗೊರೆಯಾಗಿ ತರುವಂತೆ ಹೇಳಿದ್ದಾರೆ. ಭಾರತದಲ್ಲಿ ಟೊಮ್ಯಾಟೋ ದರ ಏರಿಕೆಯ ಪರಿಣಾಮವಾಗಿ ತಾಯಿ ಕೇಳಿದ ಈ ಗಿಫ್ಟ್​​ ಸಖತ್​ ಸುದ್ದಿಯಲ್ಲಿದೆ.

    ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು

    ಇದನ್ನೂ ಓದಿ:  VIDEO | ಮಮ್ಮಿ..ಮಮ್ಮಿ.. ಮಗುವಿನ ಕೂಗು ತಾಯಿಗೆ ಕೇಳಿಸಲಿಲ್ಲ; ಪತಿಯೊಂದಿಗೆ ಸೆಲ್ಫಿ ತೆಗೆಯುತ್ತಿದ್ದ ವೇಳೆ ಸಮುದ್ರದ ಅಲೆಗೆ ಸಿಲುಕಿ ಮಹಿಳೆ ಸಾವು!

    ಭಾರತದಲ್ಲಿ ಟೊಮ್ಯಾಟೋ ಬೆಲೆಯಲ್ಲಿ ಭಾರೀ ಏರಿಕೆಯಾದ ನಂತರ ವಿಚಿತ್ರ ಕಥೆಗಳು ವೈರಲ್ ಆಗುತ್ತಿವೆ. ಟೊಮ್ಯಾಟೋ ಕಳ್ಳತನ, ಉಡುಗೊರೆಯಾಗಿ ನೀಡುವುದು ಹೀಗೆ ವಿಚಿತ್ರ ಕಥೆಗಳನ್ನು ಕೇಳಿದ್ದೇವೆ. ಆದರೆ ದುಬೈನಲ್ಲಿ ನೆಲೆಸಿರುವ ಯುವತಿ ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಆಕೆಯ ತಾಯಿ ಕೇಳಿದ ವಿಚಿತ್ರ ಉಡುಗೊರೆಯ ಕುರಿತಾಗಿ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

    ದುಬೈನಿಂದ 10 ಕೆಜಿ ಟೊಮ್ಯಾಟೋ ಖರೀದಿಸಿ ತಾಯಿಗೆ ಗಿಫ್ಟ್​​ ಮಾಡಿದ ಮಗಳು

    ಇದನ್ನೂ ಓದಿ: ಶ್ರಾವಣ ಮಾಸದಲ್ಲಿ ಮಾಂಸಾಹಾರ ಏಕೆ ಸೇವಿಸಬಾರದು?

    ‘ನನ್ನ ತಂಗಿ ತನ್ನ ಮಕ್ಕಳ ಬೇಸಿಗೆ ರಜೆಗೆ ದುಬೈನಿಂದ ಭಾರತಕ್ಕೆ ಬರುತ್ತಿದ್ದಾಳೆ.. ದುಬೈನಿಂದ ಏನಾದರೂ ಬೇಕಾ? ಅಮ್ಮನನ್ನು ಕೇಳಿದಾಗ 10 ಕೆಜಿ ಟೊಮ್ಯಾಟೋ ತರಲು ಹೇಳಿದರು. ಅವಳು ನಿಜವಾಗಿ 10 ಕೆಜಿ ಟೊಮ್ಯಾಟೋ ಗಳನ್ನು ಪ್ಯಾಕ್ ಮಾಡಿ ಕಳುಹಿಸಿದ್ದಾಳೆ ಎಂದು ಟ್ವೀಟ್​​ ಮಾಡಿದ್ದಾರೆ. ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್​​ ಮಾಡುತ್ತಿದ್ದಾರೆ.

    ಇದನ್ನೂ ಓದಿ:  ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಬಾಲಿವುಡ್​​ ನಟ ಅಭಿಷೇಕ್ ಬಚ್ಚನ್ !

    ಕೆಲವು ದಿನಗಳ ಹಿಂದೆ ಕೆಜಿಗೆ ರೂ.20ರಷ್ಟಿದ್ದ ಟೊಮ್ಯಾಟೋ ಬೆಲೆ ರೂ.250ಕ್ಕೆ ತಲುಪಿದೆ. ಭಾರತೀಯರು ವಿದೇಶದಲ್ಲಿರುವ ತಮ್ಮ ಸಂಬಂಧಿಕರಿಗೆ ಟೊಮ್ಯಾಟೋ ಉಡುಗೊರೆಯಾಗಿ ತರುವಂತೆ ಕೇಳುವ ಹಂತಕ್ಕೆ ಟೊಮ್ಯಾಟೋ ಬೆಲೆ ತಲುಪಿದೆ.

    ಇದನ್ನೂ ಓದಿ: ಪರ್ಮಿಶನ್ ಇಲ್ದೆ ಟೊಮ್ಯಾಟೋ ಅಡುಗೆಗೆ ಹಾಕಿದ್ದಕ್ಕೆ ಮನೆ ಬಿಟ್ಟು ಹೋದ ಪತ್ನಿ; ಅರ್ಧ ಕೆಜಿ ಟೊಮ್ಯಾಟೋ ಕೊಟ್ಟು ಕರೆದುಕೊಂಡು ಬಂದ ಪತಿ!

    ಪುಣೆಯಲ್ಲಿ ಟೊಮ್ಯಾಟೋ ಬೆಳೆದ ರೈತನೊಬ್ಬ ತಿಂಗಳಿನಲ್ಲಿ 3 ಕೋಟಿ ರೂಪಾಯಿ ಮೌಲ್ಯದ ಬೆಳೆಯನ್ನು ಮಾರಾಟ ಮಾಡಿ ಕೋಟ್ಯಾಧಿಪತಿಯಾದರು. ದಿನೇ ದಿನೇ ಏರುತ್ತಿರುವ ಟೊಮೆಟೊ ಬೆಲೆಯಿಂದ ಜನಸಾಮಾನ್ಯರು ಬೇಸತ್ತಿದ್ದಾರೆ.

    ಬಿರಿಯಾನಿ ತಿಂದ ನಂತರ ನಿಮಗೆ ಬಾಯಾರಿಕೆಯಾಗಲು ಕಾರಣವೇನು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts