More

    ಅತಿಯಾದ ಟೊಮ್ಯಾಟೊ ಬಳಕೆಯಿಂದ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತಾ?

    ಊಟದ ಬಳಿಕ ನಿಮಗೆ ಹೊಟ್ಟೆ ಉಬ್ಬರಿಸಿದಂತೆ ಆಗುತ್ತಿದ್ರೆ ಟೊಮಾಟೋ ಸೇವನೆ ನಿಯಂತ್ರಿಸಿ. ಅತಿಯಾಗಿ ಟೊಮಾಟೋ ಸೇವನೆ ಕರುಳಿನ ಸಮಸ್ಯೆಗೂ ಕಾರಣ ಆಗಬಹುದು. ಜೀರ್ಣಕ್ರಿಯೆ ಸಮಸ್ಯೆ ಇರುವವರು ಟೊಮ್ಯಾಟೊ ಕಡಿಮೆ ತಿನ್ನಬೇಕು.


    ಟೊಮೆಟೊದಲ್ಲಿರುವ ಹಿಸ್ಟಮೈನ್ ಎಂಬ ಸಂಯುಕ್ತವು ಅಲರ್ಜಿಯನ್ನು ಉಂಟುಮಾಡಬಹುದು. ಟೊಮೆಟೊವನ್ನು ಅತಿಯಾಗಿ ಸೇವಿಸುವುದರಿಂದ ಕೆಮ್ಮು, ಸೀನುವಿಕೆ, ಎಸ್ಜಿಮಾ, ಗಂಟಲಿನ ಕಿರಿಕಿರಿ, ಮುಖ, ಬಾಯಿ ಮತ್ತು ನಾಲಿಗೆಯ ಊತದಂತಹ ಸಮಸ್ಯೆಗಳು ಉಂಟಾಗಬಹುದು. ನಿಮಗೆ ಈಗಾಗಲೇ ಅಲರ್ಜಿ ಇದ್ದರೆ, ಟೊಮೆಟೊಗಳನ್ನು ತಿನ್ನಬೇಡಿ.


    ಟೊಮೆಟೋದಲ್ಲಿರುವ ಹಿಸ್ಟಮೈನ್ ಮತ್ತು ಸೊಲನೈನ್ ನಂತಹ ಸಂಯುಕ್ತಗಳು ದೇಹದಲ್ಲಿ ಕ್ಯಾಲ್ಸಿಯಂ ಕೊರತೆಯನ್ನು ನಿರ್ಮಿಸುತ್ತವೆ, ಇದು ಸಾಮಾನ್ಯವಾಗಿ ಕೀಲುಗಳಲ್ಲಿ ಉರಿಯೂತಕ್ಕೆ ಕಾರಣವಾಗುತ್ತದೆ. ಸಂಧಿವಾತ ಸಮಸ್ಯೆಗೂ ಇದು ಕಾರಣವಾಗಬಹುದು.


    ಟೊಮ್ಯಾಟೊ ಸೇವನೆಯ ಲಾಭ:
    ಹೃದಯವನ್ನು ಆರೋಗ್ಯವಾಗಿಡುತ್ತದೆ
    ಟೊಮೆಟೊ ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಇದರ ನಿಯಮಿತ ಸೇವನೆಯು ರಕ್ತದಲ್ಲಿನ ಟ್ರೈಗ್ಲಿಸರೈಡ್‌ಗಳ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದಯಾಘಾತವನ್ನು ತಡೆಯುತ್ತದೆ.


    ಕ್ಯಾನ್ಸರ್ ಅಪಾಯದಿಂದ ದೂರವಿಡುತ್ತದೆ
    ಟೊಮೆಟೊದಲ್ಲಿ ಲೈಕೋಪೀನ್ ನಂತಹ ಉತ್ಕರ್ಷಣ ನಿರೋಧಕಗಳಿದ್ದು, ಅವು ಕ್ಯಾನ್ಸರ್ ಕೋಶಗಳನ್ನು ತಡೆಯಲು ಸಹಾಯ ಮಾಡುತ್ತದೆ. ಇದು ಗಂಟಲು, ಬಾಯಿ, ಹೊಟ್ಟೆ, ಸ್ತನ ಮುಂತಾದ ದೇಹದ ಭಾಗದಲ್ಲಿ ಹುಟ್ಟಿಕೊಳ್ಳುವ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.


    ಮೂಳೆಗಳನ್ನು ಬಲಿಷ್ಠಗೊಳಿಸುತ್ತದೆ
    ಟೊಮ್ಯಾಟೊದಲ್ಲಿರುವ ವಿಟಮಿನ್ ಮತ್ತು ಕ್ಯಾಲ್ಸಿಯಂ ಮೂಳೆ ಅಂಗಾಂಶಗಳನ್ನು ಸರಿಪಡಿಸಲು ಮತ್ತು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದರ ನಿಯಮಿತ ಸೇವನೆಯು ಮಿದುಳಿನ ರಕ್ತಸ್ರಾವವನ್ನು ತಡೆಯುವಲ್ಲಿ ಸಹ ಬಹಳ ಪರಿಣಾಮಕಾರಿಯಾಗಿದೆ.


    ಮಧುಮೇಹವಿದ್ದವರಿಗೆ ಅಮೃತವಿದ್ದಂತೆ
    ಟೊಮೆಟೊಗಳು ಕ್ರೋಮಿಯಂನ ಉತ್ತಮ ಮೂಲವಾಗಿದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಮತ್ತು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಇದು ಮೂತ್ರದಲ್ಲಿನ ಸಕ್ಕರೆಯ ಶೇಕಡಾವಾರು ಪ್ರಮಾಣವನ್ನು ನಿಯಂತ್ರಿಸುತ್ತದೆ. ಟೈಪ್-2 ಡಯಾಬಿಟಿಸ್ ರೋಗಿಗಳಿಗೆ ನಿಯಮಿತವಾಗಿ ಟೊಮೆಟೊ ಸೇವನೆಯು ಪ್ರಯೋಜನಕಾರಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts