VIDEO | ಸಲ್ಲು ಸಹೋದರಿ ಅರ್ಪಿತಾ ದೀಪಾವಳಿ ಪಾರ್ಟಿಯಲ್ಲಿ ಕಿಂಗ್ ಖಾನ್ ಗ್ರ್ಯಾಂಡ್ ಎಂಟ್ರಿ

khan
Published on

ಮುಂಬೈ: ಭಾನುವಾರ ಅಂದರೆ ನವೆಂಬರ್ 12 ರಂದು ದೇಶದಾದ್ಯಂತ ದೀಪಾವಳಿ (ನರಕ ಚತುರ್ದಶಿ) ಹಬ್ಬವನ್ನು ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಬಾಲಿವುಡ್‌ನಲ್ಲಿ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಈ ವರ್ಷ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಇಡೀ ಚಿತ್ರರಂಗಕ್ಕೆ ದೀಪಾವಳಿ ಪಾರ್ಟಿಗಳನ್ನು ಆಯೋಜಿಸಿದ್ದಾರೆ. ಅಂತೆಯೇ ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಶರ್ಮಾ ಮತ್ತು ಆಯುಷ್ ಶರ್ಮಾ ತಮ್ಮ ಮನೆಯಲ್ಲಿ ಪಾರ್ಟಿಯನ್ನು ಆಯೋಜಿಸಿದ್ದರು.

ಈ ದೀಪಾವಳಿ ಬ್ಯಾಷ್‌ಗೆ ಹಲವು ತಾರೆಯರನ್ನು ಆಹ್ವಾನಿಸಲಾಗಿತ್ತು. ಶಿಲ್ಪಾ ಶೆಟ್ಟಿ, ಕರಿಷ್ಮಾ ಕಪೂರ್, ಶಮಿತಾ ಶೆಟ್ಟಿ, ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್ ಮತ್ತು ಅರ್ಬಾಜ್ ಖಾನ್. ಅಷ್ಟೇ ಅಲ್ಲ,  ಕಿಂಗ್ ಖಾನ್ ಶಾರುಖ್ ಖಾನ್ ಕೂಡ ಕಾಣಿಸಿಕೊಂಡಿದ್ದರು. ಸೂಪರ್‌ಸ್ಟಾರ್ ಶಾರುಖ್ ಪಾರ್ಟಿಯ ಸೆಂಟರ್​​​ ಆಫ್ ಅಟ್ರಾಕ್ಷನ್ ಎಂದರೆ ತಪ್ಪಾಗಲಾರದು.

ಶಾರುಖ್ ಖಾನ್ ಗ್ರ್ಯಾಂಡ್ ಎಂಟ್ರಿ  ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಒಟ್ಟಿಗೆ ಪಾರ್ಟಿಯಲ್ಲಿ ಭಾಗವಹಿಸುವ ಸಂದರ್ಭಗಳು ಬಹಳ ಕಡಿಮೆ. ಆದರೆ ತಡರಾತ್ರಿ ಇದೇ ರೀತಿಯ ಘಟನೆ ನಡೆದಿದೆ. ಇಬ್ಬರು ಬಾಲಿವುಡ್ ಸೂಪರ್‌ಸ್ಟಾರ್‌ಗಳು ಒಂದೇ ಸೂರಿನಡಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಅರ್ಪಿತಾ ಖಾನ್ ಶರ್ಮಾ ಅವರ ದೀಪಾವಳಿ ಪಾರ್ಟಿಗೆ 'ಪಠಾಣ್' ಅದ್ಧೂರಿಯಾಗಿ ಆಗಮಿಸಿದ್ದಾರೆ. ಶಾರುಖ್ ತನ್ನ ಕಾರಿನಿಂದ ಹೊರಬಂದು ಪಾಪರಾಜಿಗಳಿಗೆ ಪೋಸ್ ನೀಡದೆ ನೇರವಾಗಿ ಮನೆಯೊಳಗೆ ಹೋದರು. ಆದರೆ ಈ ಸಮಯದಲ್ಲಿ ಅನೇಕ ಮಾಧ್ಯಮ ಕ್ಯಾಮೆರಾಗಳು ಇದನ್ನು ಸೆರೆಹಿಡಿದವು. ಈ ವಿಶೇಷ ಸಂದರ್ಭದಲ್ಲಿ, ಅವರು ನೀಲಿ ಬಣ್ಣದ ಕುರ್ತಾ-ಪೈಜಾಮದಲ್ಲಿ ಕಾಣಿಸಿಕೊಂಡರು. ಶಾರುಖ್ ಜೊತೆಗೆ ಅವರ ಸಂಪೂರ್ಣ ಭದ್ರತಾ ಸಿಬ್ಬಂದಿಯ ತಂಡವೂ ಕಾಣಿಸಿಕೊಂಡಿದೆ.

'ಟೈಗರ್ 3'ನಲ್ಲಿ ಕಾಣಿಸಿಕೊಂಡ 'ಪಠಾಣ್'  ದೀಪಾವಳಿಯ ಸಂದರ್ಭದಲ್ಲಿ ಸಲ್ಮಾನ್ ಖಾನ್ ಅಭಿನಯದ 'ಟೈಗರ್ 3' ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟಿದೆ. ಸಲ್ಮಾನ್ ಖಾನ್, ಕತ್ರಿನಾ ಕೈಫ್ ಮತ್ತು ಇಮ್ರಾನ್ ಹಶ್ಮಿ ಅಭಿನಯದ ಟೈಗರ್ 3 ನಲ್ಲಿ ಶಾರುಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಎರಡನೇ ಭಾಗದಲ್ಲಿ 'ಪಠಾಣ್' ಎಂಟ್ರಿಯಾಗುತ್ತದೆ. ಸಲ್ಮಾನ್ ಖಾನ್ ಅವರ ಈ ಚಿತ್ರದಲ್ಲಿ ಶಾರುಖ್ ಖಾನ್ ಮಾತ್ರ ಅಲ್ಲ, ಹೃತಿಕ್ ರೋಷನ್ ಕೂಡ ಇದ್ದು, ಇಬ್ಬರು ತಾರೆಯರ ಅತಿಥಿ ಪಾತ್ರಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ರೆಸ್ಪಾನ್ಸ್ ಸಿಗುತ್ತಿದೆ. ಕಿಂಗ್ ಖಾನ್ ಶೀಘ್ರದಲ್ಲೇ 'ಡುಂಕಿ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧನ್ತೇರಸ್ ವಿಶೇಷ ಸಂದರ್ಭದಲ್ಲಿ, ಶಾರುಖ್ ಖಾನ್  ಈ ಚಿತ್ರದ ಹೊಸ ಪೋಸ್ಟರ್ ಅನ್ನು ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net