

ಮುಂಬೈ: ನಯನತಾರಾ ಹಾಗೂ ವಿಘ್ನೇಶ್ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಸದ್ಯಕ್ಕೆ ಟ್ರೋಲ್ ಆಗಿದ್ದಾರೆ.
ಅರೆ.. ಏನಿದು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇ ತಪ್ಪಾಯ್ತಾ ಎಂಬ ಪ್ರಶ್ನೆ ಮೂಡುವುದು ಸಹಜ... ಸದ್ಯ ಮದುವೆಯಲ್ಲಿ ಕಾಣಿಸಿಕೊಂಡಿದ್ದಕ್ಕೆ ಮಾತ್ರವಲ್ಲ ಇತ್ತೀಚೆಗೆ ತಮಗೆ ಕೊವಿಡ್ ಸೊಂಕು ತಗುಲಿದೆ ಎಂದು ಹೇಳಿ ಚಿಕಿತ್ಸೆ ಪಡೆಯುತ್ತಿದ್ದ ಶಾರುಖ್ ಏಕಾಏಕಿ ಮದುವೆ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿರುವುದಕ್ಕೆ ಟ್ವಿಟ್ಟಿಗರು ಟೀಕೆಯನ್ನು ಮಾಡುತ್ತಿದ್ದಾರೆ.
ಕಳೆದ ವಾರವಷ್ಟೇ ಶಾರುಖ್ ಖಾನ್ ಅವರಿಗೆ ಕರೊನಾ ಪಾಸಿಟಿವ್ ಇದೆ ಎಂದು ಸುದ್ದಿಯಾಗಿತ್ತು. ಕರೊನಾ ಲಕ್ಷಣ ಇರುವುದರಿಂದ ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿತ್ತು. ಇದಾದ ಮೂರ್ನಾಲ್ಕು ದಿನದಲ್ಲೇ ಶಾರುಖ್ ನಯನತಾರಾ-ವಿಘ್ನೇಶ್ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಮೂಡಿಸಿದೆ.
ಕೆಲ ಟ್ವಿಟ್ಟಿಗರು ಹಾಗಾದರೆ ಇವರಿಗೆ ಬಂದಿದ್ದು, ಕರೊನಾ ಅಲ್ಲ, ಆಸಿಡಿಟಿ ಇರಬಹುದು. ಏನಿದು ಎರಡು ದಿನ ಬಂದ ಕರೊನಾ ಮೂರನೇ ದಿನಕ್ಕೆ ಹೋಗಿಬಿಡ್ತಾ ಎಂದು ಪ್ರಶ್ನಿಸಿದ್ದಾರೆ. ಅವರಿಗೆ ಕೊವಿಡ್ ಅಲ್ಲ ಸ್ವಲ್ಪ ಜ್ವರ ಬಂದಿತ್ತಷ್ಟೇ ಎಂದು ಮತ್ತೊಬ್ಬ ಟ್ವಿಟಿಗ ಕಾಲೆಳೆದಿದ್ದಾರೆ. (ಏಜೆನ್ಸೀಸ್)