ತಿರುಪತಿಗೆ ಭೇಟಿ ನೀಡಿದ ನವದಂಪತಿ ನಯನತಾರಾ-ವಿಘ್ನೇಶ್​​

1286946
Published on

ತಿರುಪತಿ: ನಿನ್ನೆಯಷ್ಟೇ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನವದಂಪತಿ ನಯನತಾರಾ ಹಾಗೂ ವಿಘ್ನೇಶ್ ಶಿವನ್​​ ಇಂದು ತಿರುಪತಿಗೆ ಭೇಟಿ ನೀಡಿದ್ದಾರೆ.

ಶುಕ್ರವಾರ ಬೆಳಗ್ಗೆ ತಿರುಪತಿಗೆ ಭೇಟಿ ನೀಡಿದ ಈ ನವಜೋಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಗುರುವಾರವಷ್ಟೇ ತಮಿಳುನಾಡಿನ ಮಹಾಬಲಿಪುರಂನಲ್ಲಿ ಅದ್ಧೂರಿಯಾಗಿ ವಿವಾಹ ನಡೆಯಿತು.

ಹಸಿರು ಬಣ್ಣದ ಅಂಚಿರುವ ಹಳದಿ ಬಣ್ಣದ ಸೀರೆಯಲ್ಲಿ ಕಂಗೊಳಿಸುತ್ತಿರುವ ನಯನಾ, ಪತಿ ವಿಘ್ನೇಶ್​ ಕೂಡ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡರು.

ಬಾಲಿವುಡ್​ ನಟ ಶಾರುಖ್​​ ಖಾನ್​, ಸೇರಿದಂತೆ ರಜನಿಕಾಂತ್ ಹಾಗೂ ದಕ್ಷಿಣ ಭಾರತದ ಪ್ರಮುಖ ನಟ-ನಟಿಯರು ಮದುವೆ ಸಮಾರಂಭದಲ್ಲಿ ಭಾಗಿಯಾಗಿದ್ದರು.

ಈ ಹಿಂದೆ ತಿರುಪತಿಯಲ್ಲೇ ಮದುವೆ ನಿಶ್ಚಯಿಸಿದ್ದ ಈ ಜೋಡಿ, ಕೊನೇ ಕ್ಷಣದಲ್ಲಿ ಸ್ಥಳ ಬದಲಾಯಿಸಿದ್ದರು. ಒಟ್ಟಾರೆ ಲೇಡಿ ಸೂಪರ್​ ಸ್ಟಾರ್​ ಎಂದೇ ಕರೆಸಿಕೊಂಡಿರುವ ನಯನತಾರಾ ಹಲವು ವರ್ಷಗಳ ಡೇಟಿಂಗ್​ ಬಳಿಕ ಈ ಜೋಡಿ ಹಸೆಮಣೆಯೇರಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net