More

    ಅಭಿಮಾನಿಗಳ ಕುರಿತು ಸಾಕ್ಷ್ಯಚಿತ್ರ ಮಾಡುತ್ತಾರಂತೆ ಶಾರೂಖ್​ ಖಾನ್​!

    ಮುಂಬೈ: ಸಾಮಾನ್ಯವಾಗಿ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಕುರಿತು ಸಾಕ್ಷ್ಯಚಿತ್ರಗಳನ್ನು ಮಾಡುವುದು, ಅವರು ನಡೆದ ಬಂದ ಹಾದಿಯನ್ನು ದಾಖಲೆ ಮಾಡುವುದು ಸಹಜ. ಆದರೆ, ಶಾರೂಖ್​ ಖಾನ್​ ತಮ್ಮ ಅಭಿಮಾನಿಗಳು ಮತ್ತು ಅಭಿಮಾನಿ ಸಂಘಗಳು ನಡೆದು ಬಂದ ಹಾದಿಯನ್ನು ದಾಖಲಿಸುವುದಕ್ಕೆ ಹೊರಟಿದ್ದಾರೆ. ಈ ಸಂಬಂಧ ಒಂದು ಸಾಕ್ಷ್ಯಚಿತ್ರವನ್ನು ಮಾಡುವುದಕ್ಕೆ ತಮ್ಮ ತಂಡಕ್ಕೆ ಸೂಚಿಸಿದ್ದಾರಂತೆ.

    ಇದನ್ನೂ ಓದಿ: ಸದ್ಯದಲ್ಲೇ 300 ಕೋಟಿ ರೂ. ಕ್ಲಬ್​ಗೆ ರಿಷಭ್​ ಶೆಟ್ಟಿ ‘ಕಾಂತಾರ’

    ಶಾರೂಖ್​ ಖಾನ್​ಗೆ ಅಭಿಮಾನಿಗಳೆಂದರೆ ಬಹಳ ಗೌರವ. ಕಾರಣ, ತಾನು ಇಷ್ಟು ಎತ್ತರ ಬೆಳೆಯುವುದರಲ್ಲಿ ಅವರ ಪಾತ್ರ ಮಹತ್ವದ್ದು ಎಂಬ ನಂಬಿಕೆ ಅವರದ್ದು. ಈ ನಿಟ್ಟಿನಲ್ಲಿ ಅವರು ಅಭಿಮಾನಿಗಳನ್ನು ಸಂತೋಷಪಡಿಸುವುದಕ್ಕೆ ಸಾಧ್ಯವಾದಷ್ಟು ಪ್ರಯತ್ನಿಸುತ್ತಾರಂತೆ. ದೇಶಾದ್ಯಂತ ಇರುವ ತಮ್ಮ ಅಭಿಮಾನಿಗಳನ್ನು ಆಗಾಗ ಮನೆಗೆ ಕರೆಸಿಕೊಂಡು ಅವರನ್ನು ಸತ್ಕರಿಸಿ ಕಳಿಸುತ್ತಾರಂತೆ. ಅದೇ ಕಾರಣಕ್ಕೆ ಅವರ ಅಭಿಮಾನಿಗಳೆಲ್ಲ ಹೆಮ್ಮೆಯಿಂದ ಎಸ್​ಆರ್ಕೆಯನ್ಸ್​ ಎಂದು ತಮ್ಮನ್ನು ತಾವು ಕರೆದುಕೊಳ್ಳುತ್ತಾರೆ.

    ಈಗ ಶಾರೂಖ್​ ತಮ್ಮ 30 ವರ್ಷದ ಪಯಣದಲ್ಲಿ ಜತೆಯಾಗಿ ನಿಂತಿರುವ ಲಕ್ಷಾಂತರ ಅಭಿಮಾನಿಗಳ ಕುರಿತು ಒಂದು ವಿಶೇಷವಾದ ಸಾಕ್ಷ್ಯಚಿತ್ರವನ್ನು ಮಾಡುವುದಕ್ಕೆ ಅವರ ತಂಡದವರಿಗೆ ಸೂಚಿಸಿದ್ದಾರಂತೆ. ಈ ಸಾಕ್ಷ್ಯಚಿತ್ರದಲ್ಲಿ ಅವರ ಕೆಲವು ಅಪರೂಪದ ಅಭಿಮಾನಿಗಳು ಮತ್ತು ಅವರ ಅಭಿಮಾನದ ಕುರಿತು ಹಲವು ಮಾಹಿತಿಗಳಿರುತ್ತವಂತೆ. ಇನ್ನು, ಹೊರದೇಶಗಳಿಂದ ಪ್ರತೀವರ್ಷ ಬಂದು ಅವರನ್ನು ಭೇಟಿ ಮಾಡುವವರ ಕುರಿತೂ ದಾಖಲಿಸಲಾಗುವುದಂತೆ. ಒಟ್ಟಾರೆ, ಈ ಮೂಲಕ ತಮ್ಮ ಅಭಿಮಾನಿಗಳಿಗೆ ಗೌರವ ಸೂಚಿಸುವುದಕ್ಕೆ ಶಾರೂಖ್​ ಖಾನ್ ಹೊರಟಿದ್ದಾರೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಚಿತ್ರಕ್ಕೆ ಸಾಥ್ ಕೊಟ್ಟ ರಮ್ಯಾ … ಹೇಗೆ ಗೊತ್ತಾ?

    ಸಾಮಾನ್ಯವಾಗಿ ಶಾರೂಖ್​ ಖಾನ್​ ಅವರ ಹುಟ್ಟುಹಬ್ಬದಂದು ಅವರ ಮನೆ ‘ಮನ್ನತ್​’ ಎದುರು ಎಷ್ಟು ಜನ ಜಮಾಯಿಸುತ್ತಾರೆ, ತಮ್ಮ ಮೆಚ್ಚಿನ ನಟನನ್ನು ಮೆಚ್ಚಿಸಲು ಏನೆಲ್ಲ ಮಾಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಇತ್ತೀಚೆಗಷ್ಟೇ ಶಾರೂಖ್​ ತಮ್ಮ 57ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದು, ಈ ಸಂದರ್ಭದಲ್ಲಿ ಹಲವು ದೃಶ್ಯಗಳನ್ನು ಸೆರೆಹಿಡಿಯಲಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಮುಗಿಸಿ ಬಿಡುಗಡೆ ಮಾಡಲಾಗುತ್ತದಂತೆ. ಈ ಸಾಕ್ಷ್ಯಚಿತ್ರವನ್ನು ಒಂದು ಓಟಿಟಿಗೆ ಕೊಡುವ ಯೋಚನೆ ಶಾರೂಖ್​ ಖಾನ್​ ಅವರಿಗಿದ್ದು, ಯಾವ ಓಟಿಟಿಯಲ್ಲಿ ಇದು ಪ್ರಸಾರವಾಗುತ್ತದೆ ಎಂಬ ಕುತೂಹಲ ಎಲ್ಲರಿಗೂ ಇದೆ.

    ಮರಾಠಿ ಚಿತ್ರರಂಗಕ್ಕೆ ಅಕ್ಷಯ್​ ಕುಮಾರ್; ಛತ್ರಪತಿ ಶಿವಾಜಿಯಾಗಿ ನಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts