ಶಾರುಖ್‌ ಖಾನ್​​ಗೆ ಕಣ್ಣಿನ ಸಮಸ್ಯೆ; ಹೆಚ್ಚಿನ ಚಿಕಿತ್ಸೆಗಾಗಿ ಅಮೆರಿಕಕ್ಕೆ ಶಿಫ್ಟ್​

ShahRukh Khan
Published on

ಮುಂಬೈ: ಬಾಲಿವುಡ್ ಕಿಂಗ್ ಶಾರುಖ್ ಖಾನ್  ಅವರಿಗೆ  ಕಣ್ಣಿನ ಸಮಸ್ಯೆ ಇರುವುದು ಗೊತ್ತೇ ಇದೆ. ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗುತ್ತಿದ್ದಾರೆ. ಇದೀಗ ಕಣ್ಣಿನ ಸಮಸ್ಯೆಯ ವಿಚಾರ ಹೊರಬೀಳುತ್ತಿದ್ದಂತೆ ಅವರ ಅಭಿಮಾನಿಗಳು ಕಂಗಾಲಾಗಿದ್ದಾರೆ.

ಬಾಲಿವುಡ್ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಸೋಮವಾರ ಜುಲೈ 29 ರಂದು ಶಾರುಖ್ ಖಾನ್ ಮುಂಬೈನ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿಯೇ ಕಣ್ಣಿನ ಚಿಕಿತ್ಸೆಗೆ ಒಳಗಾಗಲು ಬಯಸಿದ್ದರು. ಆದರೆ ಅಂದುಕೊಂಡಂತೆ ಆಗಲಿಲ್ಲ. ಆಗಿರುವ ಹಾನಿ ಸರಿಪಡಿಸಲು ತುರ್ತಾಗಿ ಅಮೆರಿಕಕ್ಕೆ ತೆರಳುತ್ತಿದ್ದಾರೆ ಎನ್ನಲಾಗಿದೆ.

ಇವತ್ತು ಅಥವಾ ನಾಳೆ ಶಾರುಖ್ ಖಾನ್ ಅಮೆರಿಕಕ್ಕೆ ಹೋಗಿ ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳಲಿದ್ದಾರೆ. ಆದರೆ ಏನಾಯಿತು...ಕಣ್ಣಿಗೆ ಏನು ಸಮಸ್ಯೆ? ಮುಂಬೈನಲ್ಲಿ ತುಂಬಾ ದೊಡ್ಡ ಡಾಕ್ಟರುಗಳಿದ್ದಾರೆ..ಆದರೂ ಯಾಕೆ ಸೆಟ್ ಆಗಿಲ್ಲ ಅನ್ನೋದು ಮಾತ್ರ ಯಾರಿಗೂ ತಿಳಿಯದ ಸಂಗತಿಯಾಗಿದೆ.

ಶಾರುಖ್ ಈಗಾಗಲೇ 2014 ರಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆದರೆ ಸಮಸ್ಯೆ ಮತ್ತೆ ಪುನರಾವರ್ತನೆಯಾಗಿದೆ ಎಂದು ತೋರುತ್ತದೆ. ಇತ್ತೀಚೆಗಷ್ಟೇ ಯುಕೆಯಿಂದ ಬಂದಿರುವ ನಟ ಶಾರುಖ್ ಖಾನ್ ಅವರು ತಮ್ಮ ಕಣ್ಣಿನ ಚಿಕಿತ್ಸೆಗಾಗಿ ತುರ್ತಾಗಿ ಯುಎಸ್ಎಗೆ ಹೋಗುತ್ತಿದ್ದಾರೆ ಎಂದು ತೋರುತ್ತದೆ. ಶಾರುಖ್ ಕಣ್ಣಿನ ಸಮಸ್ಯೆಯಿಂದ ಮುಂಬೈನ ಆಸ್ಪತ್ರೆಗೆ ಹೋಗಿದ್ದಾರೆ ಮತ್ತು ವೈದ್ಯರು ಅವರನ್ನು ಚಿಕಿತ್ಸೆಗಾಗಿ ಅಮೆರಿಕಕ್ಕೆ ರೆಫರ್ ಮಾಡಿದ್ದಾರೆ ಎಂದು ತೋರುತ್ತದೆ. ಜುಲೈ 30ರಂದು ಶಾರುಖ್ ಕಣ್ಣಿನ ಆಪರೇಷನ್ ಗಾಗಿ ಅಮೆರಿಕಕ್ಕೆ ತೆರಳಲಿದ್ದಾರಂತೆ.

ಶಾರುಖ್ ತಮ್ಮ 32 ವರ್ಷಗಳ ನಟನಾ ವೃತ್ತಿಜೀವನದಲ್ಲಿ 100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಕಳೆದ ವರ್ಷ 'ಪಠಾಣ್', 'ಜವಾನ್' ಮತ್ತು 'ಡಂಕಿ' ಚಿತ್ರಗಳೊಂದಿಗೆ ರಂಜಿಸಿದ ಅವರು ಪ್ರಸ್ತುತ ಸುಜೋಯ್ ಘೋಷ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ ಪುತ್ರಿ ಸುಹಾನಾ ಖಾನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ ಈ ಚಿತ್ರಕ್ಕೆ ‘ಕಿಂಗ್’ ಎಂಬ ಶೀರ್ಷಿಕೆಯನ್ನು ಅಂತಿಮಗೊಳಿಸಲಾಗಿದೆ ಎಂದು ವರದಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net