More

    ಡಚ್ ಗಾಯಕಿ ಎಮ್ಮಾ ಹೀಸ್ಟರ್ಸ್ ಹಾಡಿದ ಜವಾನ್​​ ಸಿನಿಮಾದ ‘ಚಲೇಯಾ’ ಸಾಂಗ್​ ವೈರಲ್​​; ಶಾರುಖ್​​ ಖಾನ್​ ಮೆಚ್ಚುಗೆ

    ಅಟ್ಲಿ ಅವರ ಜವಾಲನ್ ಸಿನಿಮಾ ಭರ್ಜರಿ ಹಿಟ್ ಆಗಿದೆ. ಜವಾನ್ ಸಿನಿಮಾ ಎಲ್ಲೆಡೆ ಸದ್ದು ಮಾಡಿದ್ದು ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ 6 ದಿನದಲ್ಲಿ 600 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಈ ಸಿನಿಮಾ ಬಜೆಟ್ ಕುರಿತು ಅಟ್ಲಿ ಇತ್ತೀಚೆಗೆ ಮಾತನಾಡಿದ್ದಾರೆ. ಇದೀಗ ಅದೇ ಸಿನಿಮಾದ ಹಾಡಂದನ್ನ ಡಚ್​ ಗಾಯಕಿ ಹಾಡಿದ್ದು, ಚಲ್ಲೆಯಾ ಹಾಡನ್ನ ಮತ್ತೊಮ್ಮೆ ಡಚ್​ ಗಾಯಕಿ ವೈರಲ್​ ಮಾಡಿದ್ದಾರೆ.


    ಡಚ್ ಗಾಯಕಿ ಎಮ್ಮಾ ಹೀಸ್ಟರ್ಸ್ ಅವರ ಕಹಾನಿ ಸುನೋ 2.0 ರ ಕವರ್‌ ವೀಡಿಯೊವು ಆನ್‌ಲೈನ್‌ನಲ್ಲಿ 7 ಮಿಲಿಯನ್ ವೀಕ್ಷಣೆಗಳೊಂದಿಗೆ ವೈರಲ್ ಆಗಿತ್ತು. ಕೆಲವು ಹಿಂದಿ ಹಾಡುಗಳು ಕೇಳುಗರನ್ನು ಮತ್ತೆ ಮತ್ತೆ ಅದೇ ಹಾಡು ಪ್ಲೇ ಮಾಡುವಂತೆ ಮಾಡುತ್ತೆ. ಇದೀಗ ಚಲ್ಲೇ ಹಾಡು ಕೂಡಾವ ಅದೇ ಲಿಸ್ಟನ್ನ ಸೇರಿದೆ.


    ಡಚ್ ಗಾಯಕಿ ಎಮ್ಮಾ ಹೀಸ್ಟರ್ಸ್ ಅವರ+ ‘ಚಲೇಯಾ’ ಹಾಡಿನ ಕವರ್ ವೀಡಿಯೊ ಇದೀಗ ವೈರಲ್​ ಆಗಿದ್ದು, ಈ ವಿಡಿಯೋವನ್ನ ಡಷ್​ ಗಾಯಕಿ ಎಕ್ಸ್​(ಟ್ವಿಟ್ಟರ್​​​)ನಲ್ಲಿ ಪೋಸ್ಟ್​​ ಮಾಡಿದ್ದಾರೆ. ಎಮ್ಮಾ ಜನಪ್ರಿಯ ಬಾಲಿವುಡ್ ಹಾಡುಗಳು ಮತ್ತು ಇಂಗ್ಲಿಷ್ ರೀಮಿಕ್ಸ್‌ಗಳನ್ನ ಸಖತ್ತಾಗಿ ಮಾಡ್ತಾರೆ. ಕವರ್​​ ಸಾಂಗ್​ ಹಾಡುವುದಕ್ಕೆ ಪೇಮಸ್​ ಆಗಿರುವ ಡಚ್​ ಗಾಯಕಿ, ಇತ್ತೀಚೆಗೆ ‘ಚಲೇಯಾ’ ಹಾಡಿನ ಇಂಗ್ಲಿಷ್​​​ ಮಿಕ್ಸ್​ ವರ್ಷನ್​​ ಬಿಡುಗಡೆ ಮಾಡಿದ್ದರು.


    ‘ಚಲೇಯ’ ಇಂಗ್ಲಿಷ್ ಕವರ್ ಸಾಂಗ್​ ಈವರೆಗೂ 6ಲಕ್ಷಕ್ಕೂ ಹೆಚ್ಚು ವೀಕ್ಷಣೆ ಗಳಿಸಿದ್ದು, ನೆಟ್ಟಿಗರು ಹೆಚ್ಚಿನ ಸಂಖ್ಯೆಯಲ್ಲಿ ಈ ಹಾಡಿಗೆ ಕಾಮೆಂಟ್​ ಮಾಡಿದ್ದಾರೆ. ವಿಶೇಷ ಅಂದ್ರೆ ಸ್ವತ: ಶಾರುಖ್​​ ಖಾನ್ ಅವರೇ ಡಚ್​​ ಸಿಂಗರ್​​ನ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts