ಕಂಗನಾಗೆ ಮಹೇಶ್​ ಭಟ್​ ಚಪ್ಪಲಿಯಲ್ಲಿ ಹೊಡೆದಿದ್ದು ಅಪ್ಪಟ ಸುಳ್ಳಂತೆ ...

Kangana - Mahesh Bhatt - Final
Published on

ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದವರು ಅವರು. ಹಾಗಂತ ಚಪ್ಪಲಿ ಎಸೆಯುವುದಕ್ಕೆ ಅನುಮತಿ ಕೊಟ್ಟವರು ಯಾರು?

ಹಾಗಂತ ಕೆಲವು ದಿನಗಳ ಹಿಂದೆ ಕಂಗನಾ ಪ್ರಶ್ನಿಸಿದ್ದರು. ಹಲವು ವರ್ಷಗಳ ಹಿಂದೆ, ಹಿರಿಯ ನಿರ್ದೇಶಕ ಮಹೇಶ್​ ಭಟ್​ ಅವರು ಕಂಗನಾ ಮೇಲೆ ಚಪ್ಪಲಿ ಎಸೆದಿದ್ದರಂತೆ. ಈ ಕುರಿತು ಕೆಲವು ದಿನಗಳ ಹಿಂದೆ ಕಂಗನಾ ಬೇಸರಿಸಿಕೊಂಡಿದ್ದರು. ಈ ಬಗ್ಗೆ ಸೋಷಿಯಲ್​

ಮೀಡಿಯಾದಲ್ಲೂ ಸಾಕಷ್ಟು ಚರ್ಚೆಯಾಗಿತ್ತು.

ಭಾನುವಾರವಷ್ಟೇ ಗಾಯಕ ಸೋನು ನಿಗಮ್​ ಸಹ ಕಂಗನಾ ಪರವಾಗಿ ಮಾತನಾಡಿದ್ದರು. ಕಂಗನಾ ಈ ವಿಷಯದಲ್ಲಿ ಸುಳ್ಳು ಹೇಳುವುದಕ್ಕೆ ಚಾನ್ಸೇ ಇಲ್ಲ, ಯಾರಾದರೂ ಯಾಕೆ ಈ ತರಹ ಸುಳ್ಳು ಹೇಳಬೇಕು ಎಂದು ಅವರು ಪ್ರಶ್ನಿಸಿದ್ದರು.

ಆದರೆ, ಕಂಗನಾ ಈ ವಿಷಯದಲ್ಲಿ ಸುಳ್ಳು ಹೇಳುತ್ತಿದ್ದಾರೆ ಮತ್ತು ಈ ಘಟನೆಗೆ ನಾನೇ ಸಾಕ್ಷಿಯಾಗಿದ್ದೆ ಎಂದು ಬರಹಗಾರ್ತಿ ಶಗುಫ್ತಾ ರಫೀಕ್​ ಹೇಳಿದ್ದಾರೆ. ಈ ಕುರಿತು ಮಾತನಾಡಿರುವ ಅವರು, 'ಕಳೆದ ಹಲವು ದಿನಗಳಿಂದ ಈ ವಿಷಯವಾಗಿ ಕೇಳುತ್ತಲೇ ಬಂದಿದ್ದೇನೆ. ಆದರೆ, ಇದು ಅಪ್ಪಟ ಸುಳ್ಳು. ಏಕೆಂದರೆ, ನಾನು ಸಹ ಆ ಸಂದರ್ಭದಲ್ಲಿ ಅಲ್ಲಿಯೇ ಇದ್ದೆ. ಇದಾಗಿದ್ದು 2006ರಲ್ಲಿ, 'ವೋ ಲಮ್ಹೇ' ಚಿತ್ರದ ಸಂದರ್ಭದಲ್ಲಿ. ಚಿತ್ರೀಕರಣಕ್ಕೆ ಕಂಗನಾ ತಡವಾಗಿ ಬಂದರು. ಇದರಿಂದ ಸಿಟ್ಟಾದ ಮಹೇಶ್​ ಭಟ್​, ಸಿಕ್ಕಾಪಟ್ಟೆ ಬೈದರು. ಅವರು ಯಾವತ್ತೂ ಆ ರೀತಿ ಬೈದಿದ್ದು ನಾನು ನೋಡಿಯೇ ಇಲ್ಲ. ಅವರು ಎಲ್ಲರ ಮುಂದೆ ಬೈದಿದ್ದು ಸ್ವಲ್ಪ ಜಾಸ್ತಿಯಾದರೂ, ಅವರು ಕೈಎತ್ತಿದ್ದು, ಚಪ್ಪಲಿ ಎಸೆದಿದ್ದು ಎಲ್ಲವೂ ಸುಳ್ಳು' ಎಂದು ಹೇಳಿಕೊಂಡಿದ್ದಾರೆ ಶಗುಫ್ತಾ.

ಈ ಘಟನೆಗೆ ಅವರೊಬ್ಬರೇ ಸಾಕ್ಷಿಯಲ್ಲವಂತೆ. ಆ ಸಂದರ್ಭದಲ್ಲಿ ನಿರ್ದೇಶಕ ಮೋಹಿತ್​ ಸೂರಿ, ಮಹೇಶ್​ ಭಟ್​ ಅವರ ಸಹೋದರ ಮುಕೇಶ್​ ಭಟ್​ ಮತ್ತು ಚಿತ್ರದಲ್ಲಿ ಕೆಲಸ ಮಾಡಿದ ಹಲವು ಕಲಾವಿದರು ಮತ್ತು ತಂತ್ರಜ್ಱರು ಸಹ ಸಾಕ್ಷಿಯಾಗಿದ್ದರು ಎನ್ನುತ್ತಾರೆ ಶಗುಫ್ತಾ.

ಇನ್ನು ನೆಪೋಟಿಸಂ (ಸ್ವಜನಪಕ್ಷಪಾತ)ದ ಕುರಿತಾಗಿ ಮಾತನಾಡುವ ಅವರು, ಮಹೇಶ್​ ಭಟ್​ ಯಾವತ್ತೂ ಇಂಥದ್ದನ್ನೆಲ್ಲಾ ಪ್ರೋತ್ಸಾಹಿಸುವುದಿಲ್ಲ ಎಂದು ಹೇಳಿದ್ದಾರೆ. 'ಭಟ್​ ಇದುವರೆಗೂ ಹಲವರು ಹೊಸಬರನ್ನು ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಅಷ್ಟೇ ಏಕೆ, ನಾನು ಮೊದಲು ಬಾರ್​ಗಳಲ್ಲಿ ಡ್ಯಾನ್ಸ್​ ಮಾಡುತ್ತಿದ್ದೆ. ನನ್ನ ಪ್ರತಿಭೆ ಗುರುತಿಸಿ ಬರೆಯುವುದಕ್ಕೆ ಅವಕಾಶ ಕೊಟ್ಟವರು ಅವರು. ಅವರ ಚಿತ್ರಗಳಿಂದ ನನಗೆ ಬ್ರೇಕ್​ ಸಿಕ್ಕಿತು ಮತ್ತು ನನ್ನ ಬದುಕೇ ಬದಲಾಯಿತು' ಎಂದು ಶಗುಫ್ತಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net