

ಕಿನ್ನಿಗೋಳಿ: ಕಿನ್ನಿಗೋಳಿಯ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳನ್ನು ಹುಟ್ಟುಹಬ್ಬ ಆಚರಿಸುವ ನೆಪದಲ್ಲಿ ಕರೆದೊಯ್ದ ಲೈಂಗಿಕ ದೌಜನ್ಯವೆಸಗಿದ್ದ ಘಟನೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಇದೀಗ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಕಿನ್ನಿಗೋಳಿಯ ಉದ್ಯಮಿ ಪಿಂಟೋ ಗಾರ್ಡನ್ ಮಾಲೀಕ ರೋಕಿ ಪಿಂಟೋ(68) ಎಂಬಾತನನ್ನು ಬಾಲಕಿಯ ತಾಯಿ ನೀಡಿದ ದೂರಿನಂತೆ ಮೂಲ್ಕಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿ ರೋಕಿ ಪಿಂಟೋ ವಾಟ್ಸಾೃಪ್ ಮೂಲಕ ಬಾಲಕಿಗೆ ಅಶ್ಲೀಲ ಮೆಸೇಜ್ ಕಳಿಸುತ್ತಿದ್ದ, ಕಳೆದ ಎರಡು ತಿಂಗಳಲ್ಲಿ ತಮ್ಮ ಫಾರ್ಚುನರ್ ವಾಹನದಲ್ಲಿ ಬಾಲಕಿಯನ್ನು ಶಾಲೆಗೆ ಕರೆದುಕೊಂಡು ಹೋಗಿ ಬರುತ್ತಿದ್ದು ಬಳಿಕ ಬಾಲಕಿಯನ್ನು ಪುಸಲಾಯಿಸಿ ಕಾರಿನಲ್ಲಿ ಹೋಗುವಾಗ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂದು ಬಾಲಕಿ ಪೊಲೀಸರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾಳೆ.
ಈ ಬಗ್ಗೆ ಬಾಲಕಿಯ ತಾಯಿ ರೋಕಿ ಪಿಂಟೋ ವಿರುದ್ಧ ಮುಲ್ಕಿ ಠಾಣೆಗೆ ದೂರು ನೀಡಿದ್ದು ಮುಲ್ಕಿ ಪೊಲೀಸರು ಆರೋಪಿಯ ಫಾರ್ಚುನರ್ ವಾಹನ ವಶಪಡಿಸಿಕೊಂಡು ಪೋಕ್ಸೋ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಅಧಿಕ ರಕ್ತದೊತ್ತಡಕ್ಕೆ ಒಳಗಾಗಿ ಮೂಲ್ಕಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.