

ಕೊಡಗು: ವಿವಾಹಿತ ಮಹಿಳೆಯರಿಗೆ ಅಶ್ಲೀಲ ಮೆಸೇಜ್ಗಳನ್ನು ಕಳಿಸಿ, ವಿಕೃತ ಸಂತೋಷ ಪಡುತ್ತಿದ್ದ ಕಾಮುಕನಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಮುದಾಸಿರ್ ಸಾರ್ವಜನಿಕರಿಂದ ಗೂಸಾ ತಿಂದವನು.
ಮೊಬೈಲ್ ಶಾಪ್ನಲ್ಲಿ ಕೆಲಸ ಮಾಡುತ್ತಿದ್ದ ಈತ ಕರೆನ್ಸಿ ಹಾಕಲು ಬರುತ್ತಿದ್ದ ಮಹಿಳೆಯರ ಮೊಬೈಲ್ ನಂಬರ್ಗಳನ್ನು ಪಡೆಯುತ್ತಿದ್ದ. ನಂತರ ಅವರ ಮೊಬೈಲ್ಗೆ ಸೆಕ್ಸ್ಗೆ ಸಂಬಂಧಪಟ್ಟ ಅಸಭ್ಯ ಸಂದೇಶಗಳನ್ನು ಕಳಿಸುತ್ತಿದ್ದ. ಈಗಾಗಲೇ ಹಲವು ವಿವಾಹಿತ ಮಹಿಳೆಯರಿಗೆ ಹೀಗೇ ಮಾಡಿದ್ದ. ಅಷ್ಟೇ ಅಲ್ಲ ಫೇಸ್ಬುಕ್ನಲ್ಲಿ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿಕೊಂಡು ಅಶ್ಲೀಲ ಕಾಮೆಂಟ್ಗಳನ್ನೂ ಮಾಡುತ್ತಿದ್ದ. ಇದನ್ನೂ ಓದಿ: ರಾಗಿಣಿಗಾಗಿ ಪಾಲಕರು ತಂದ ಬಟ್ಟೆಯನ್ನು ದೇವಸ್ಥಾನದ ಎದುರು ಇಟ್ಟ ಪೊಲೀಸರು
ಇತ್ತೀಚೆಗೆ ಓರ್ವ ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ಕಳಿಸಿದ್ದ. ಮಹಿಳೆಯೇ ಆತನನ್ನು ತಾನಿರುವ ಜಾಗಕ್ಕೆ ಕರೆಸಿ, ಕೊಡಗು ರಕ್ಷಣಾ ವೇದಿಕೆಗೂ ಮಾಹಿತಿ ನೀಡಿದ್ದರು. ಹಾಗೇ ಮಹಿಳೆ ಇದ್ದಲ್ಲಿ ಬಂದು ನಗುತ್ತ ಮಾತನಾಡುತ್ತಿದ್ದ ಈತನಿಗೆ ಸಾರ್ವಜನಿಕರು ಶಾಕ್ ಕೊಟ್ಟಿದ್ದಾರೆ. ಸ್ಥಳಕ್ಕೆ ಬಂದ ಕೊಡಗು ರಕ್ಷಣಾ ವೇದಿಕೆ ಕಾರ್ಯಕರ್ತರು, ಸಾರ್ವಜನಿಕರು ಈತನಿಗೆ ಮನಬಂದಂತೆ ಥಳಿಸಿದ್ದಾರೆ. (ದಿಗ್ವಿಜಯ ನ್ಯೂಸ್)