ಜುಗಾರಿ ನಿರತ ಏಳು ಮಂದಿ ಬಂಧನ

GAMBLING
Published on

ಗಂಗೊಳ್ಳಿ: ಕುಂದಾಪುರ ತಾಲೂಕು ಕೋರ್ಗಿ ಗ್ರಾಮದ ಮೂಡು ಕೊರ್ಗಿ ಎಂಬಲ್ಲಿ ಇಸ್ಪೀಟು ಆಟವಾಡುತ್ತಿದ್ದ ಏಳು ಜನರನ್ನು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್‌ಐ ಭೀಮಾಶಂಕರ ಸಿನ್ನೂರ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ದಿನೇಶ ಎಸ್., ಶೇಖರ, ಮಂಜುನಾಥ, ಉದಯ, ಹೆರಿಯ, ಸುಭಾಳ್ ಮತ್ತು ಸುಭಾಶ್ಚಂದ್ರ ಬಂಧಿತರು. ಇವರಿಂದ ಆಟಕ್ಕೆ ಬಳಸಿದ್ದ 11,820 ರೂ. ಹಾಗೂ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net