ಕಳ್ಳತನಕ್ಕೆ ಯತ್ನಿಸಿದಾತನ ಬಂಧನ

kallathana
ಕಳ್ಳತನಕ್ಕೆ ಯತ್ನಿಸಿ ಬಂಧಿತನಾದ ಕಳ್ಳ
Published on

ಗಂಗೊಳ್ಳಿ: ಕುಂದಾಪುರ ತಾಲೂಕಿನ ಹೊಸಾಡು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಸೊಸೈಟಿಯ ಕಿಟಕಿಯ ಸರಳಗಳನ್ನು ಮುರಿದು ಸೊಸೈಟಿಯ ಕಳ್ಳತನಕ್ಕೆ ಯತ್ನಿಸಿದ ಅಂತಾರಾಜ್ಯ ಕಳ್ಳನನ್ನು ಗಂಗೊಳ್ಳಿ ಪೊಲೀಸರು ಬಂಧಿಸಿದ್ದಾರೆ.

ಶುಕ್ರವಾರ ಮಧ್ಯರಾತ್ರಿ ಪಂಚಗಂಗಾ ವ್ಯವಸಾಯ ಸೇವಾ ಸಹಕಾರಿ ಸಂಘದ ಹೊಸಾಡು ಶಾಖೆ ಕಟ್ಟಡದ ಕಿಟಿಕಿಯ ಸರಳುಗಳನ್ನು ಮುರಿದು ಒಳನುಗ್ಗಿದ ಕಳ್ಳನ ಮಾಹಿತಿ ಕುಂದಾಪುರದ ಶೈನ್ ಇನ್ ಸೆಕ್ಯುರಿಟಿ ಲೈವ್ ಸಿಸಿ ಕ್ಯಾಮರಾದಲ್ಲಿ ವೀಕ್ಷಿಸಿ ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿದ್ದ ಪಿಎಸ್‌ಐ ಬಸವರಾಜ ಕನಶೆಟ್ಟಿಯವರಿಗೆ ಮಾಹಿತಿ ನೀಡಿದ್ದು, ಪಿಎಸ್‌ಐ ಬಸವರಾಜ ಕನಶೆಟ್ಟಿ ಸಿಬ್ಬಂದಿ ಮೋಹನ ಪೂಜಾರಿ ಅವರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಳ್ಳತನ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತನನ್ನು ಕಳ್ಳತನ ಪ್ರಕರಣದಲ್ಲಿ ಭಾಗಿಯಾದ ಅಂತಾರಾಜ್ಯ ಆರೋಪಿ ಕೇರಳ ಮೂಲದ ಪ್ರಕಾಶ್ ಬಾಬು ಯಾನೆ ನಿಯಾಝ್ (46) ಎಂದು ತಿಳಿದು ಬಂದಿದೆ. ಬಂಧಿತನಿಂದ ಕಳವು ಮಾಡಿದ 2,000 ರೂ. ನಗದು, ಕಳವು ಮಾಡಲು ಬಂದ ಸ್ಕೂಟರ್, ಮೊಬೈಲ್ ಸೆಟ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಮೂರು ರಾಡ್, ಕಟ್ಟಿಂಗ್ ಪ್ಲೇಯರ್ ಸೇರಿದಂತೆ ಇನ್ನಿತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net