ಲಾರಿ ಪಲ್ಟಿಯಾಗಿ ಏಳು ಕೂಲಿ ಕಾರ್ಮಿಕರ ಸಾವು, ಮೂವರು ಗಂಭೀರ

Accident
Published on

ಗೋದಾವರಿ: ಗೋಡಂಬಿ ಲೋಡ್​ ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದ ಪರಿಣಾಮ 7 ಮಂದಿ ಕೂಲಿ ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಯ ದೇವರಪಲ್ಲಿ ತಾಲ್ಲೂಕಿನ ಚಿಲಕವಾರಿಪಾಕಲ ಎಂಬಲ್ಲಿ ನಡೆದಿದೆ. ಏಳೂರು ಜಿಲ್ಲೆಯ ಬೋರಂಪಾಲೆಂ ಗ್ರಾಮದಿಂದ ಪೂರ್ವ ಗೋದಾವರಿ ಜಿಲ್ಲೆಯ ತಾಡಿಮಲ್ಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಮೃತರನ್ನು ತಮ್ಮಿ ರೆಡ್ಡಿ ಸತ್ಯನಾರಾಯಣ (45), ದೇಶಭಟ್ಟುಲ ವೆಂಕಟರಾವ್ (40), ಬೊಕ್ಕ ಪ್ರಸಾದ್ (32), ಪೆನುಗುರ್ತಿ ಚಿನ್ನ ಮುಸಲಯ್ಯ (35), ಕತ್ತಿವ ಕೃಷ್ಣ (40), ಕತ್ತಿವ ಸತ್ತಿಪಂಡು (40), ತಾಡಿ ಕೃಷ್ಣ (45) ಎಂದು ಗುರುತಿಸಲಾಗಿದೆ. ಮಂಗಳವಾರ ತಡರಾತ್ರಿ ಅಪಘಾತ ಸಂಭವಿಸಿದ್ದು, ಮೃತರ ಪೈಕಿ ಆರು ಮಂದಿ ತಾಡಿಮಳ್ಳ ಗ್ರಾಮದ ನಿವಾಸಿಗಳು ಎಂದು ವರದಿಯಾಗಿದ್ದು, ಘಟನೆಯಲ್ಲಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದಾರೆ.

ವಿಚಾರ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ದೇವರಪಲ್ಲಿ ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಅಧಿಕಾರಿಗಳು ಅಪಘಾತಕ್ಕೆ ನಿಖರ ಕಾರಣವನ್ನು ಹುಡುಕುತ್ತಿದ್ದಾರೆ. ಅಪಘಾತದ ನಂತರ ಲಾರಿ ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನನ್ನು ಹುಡುಕಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net