ಜಬಲ್ಪುರ್: ಜನವರಿ 13ರಂದು ಆರಂಭವಾದ ಮಹಾಕುಂಭಮೇಳವು (Maha Kumbh Mela) ಈಗಾಗಲೇ ನಾನಾ ಕಾರಣಗಳಿಂದ ಸದ್ದು ಮಾಡುತ್ತಿದ್ದು, ವಿಶ್ವದ ಗಮನ ಸೆಳೆಯುತ್ತಿದೆ ಎಂದರೆ ತಪ್ಪಾಗಲಾರದು. ಇದೀಗ ಮಹಾಕುಂಭಮೇಳಕ್ಕೆ ತೆರಳಿ ವಾಪಸ್ ಆಗುತ್ತಿದ್ಧಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದ 7 ಮಂದಿ ಮೃತಪಟ್ಟಿರುವುದಾಗಿ ವರದಿಯಾಗಿದೆ.
ಘಟನೆಯು ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಸಿಹೋರಾ ಬಳಿ ರಾಷ್ಟ್ರೀಯ ಹೆದ್ದಾರಿ-30ರಲ್ಲಿ ಈ ಅಪಘಾತ ಸಂಭವಿಸಿದ್ದು, ಮೃತ ಏಳು ಮಂದಿ ಆಂಧ್ರಪ್ರದೇಶ ಮೂಲದವರು ಎಂದು ತಿಳಿದು ಬಂದಿದೆ.
#WATCH एक टेम्पो ट्रैवलर प्रयागराज से आंध्र प्रदेश लौट रही थी। जबलपुर के कटनी की तरफ जा रहा एक ट्रक अनियंत्रित होकर सड़क की दूसरी तरफ चला गया। जिसके चलते टेम्पो और ट्रक के बीच दुर्घटना हुई। दुर्घटना में 7 लोगों की मृत्यु हो गई, 2 लोग घायल हैं जिन्हें अस्पताल पहुंचाया गया है:… pic.twitter.com/p5avsFVzsg
— ANI_HindiNews (@AHindinews) February 11, 2025
ಘಟನೆಯ ಕುರಿತು ಮಾತನಾಡಿರುವ ಜಬಲ್ಪುರದ ಎಎಸ್ಪಿ ಸೂರ್ಯಕಾಂತ್ ಶರ್ಮ, ಮೃತರೆಲ್ಲರೂ ಆಂಧ್ರಪ್ರದೇಶದ ನಿವಾಸಿಗಳೆಂದು ತಿಳಿದು ಬಂದಿದ್ದು, ಮಹಾಕುಂಭಮೇಳಕ್ಕೆ (Maha Kumbh Mela) ತೆರಳಿ ವಾಪಸ್ ಆಗುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ಪ್ರತ್ಯಕ್ಷದರ್ಶಿಗಳು ಹಾಗೂ ಗಾಯಾಳುಗಳು ಹೇಳುವ ಪ್ರಕಾರ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ದುರ್ಘಟನೆ ಸಂಭವಿಸಿದ್ದು, ಅಪಘಾತದ ಬಳಿಕ ಲಾರಿಯನ್ನು ಬಿಟ್ಟು ಚಾಲಕ ಪರಾರಿಯಾಗಿದ್ಧಾನೆ.
ಗಾಯಾಳುಗಳ ಪೈಕಿ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಚಾಲಕನನ್ನು ಪತ್ತೆಹಚ್ಚಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಸಿಸಿಟಿವಿಗಳನ್ನು ಪರಿಶೀಲಿಸಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು. ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ಜಬಲ್ಪುರದ ಎಎಸ್ಪಿ ಸೂರ್ಯಕಾಂತ್ ಶರ್ಮ ತಿಳಿಸಿದ್ದಾರೆ.
ಪಂಜಾಬ್ ಸಿಎಂ ಆಗಿ ಕೇಜ್ರಿವಾಲ್ ಪದಗ್ರಹಣ? ನಿಜವಾಗುತ್ತ Congress ನಾಯಕರು ನುಡಿದ ಭವಿಷ್ಯ
ಹಾಡಹಗಲೇ ವಿದ್ಯಾರ್ಥಿನಿಯನ್ನು Kidnap ಮಾಡಿದ ಯುವಕರು; ಆರೋಪಿಗಳ ಫೋಟೋ ರಿಲೀಸ್, ವಿಡಿಯೋ ವೈರಲ್